ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗಬೇಕು, ಇಲ್ಲವಾದರೆ ಬಂಡಾಯ ಏಳುತ್ತೇನೆ: ಜಾರಕಿಹೊಳಿ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2028ರ ವಿಧಾನಸಭಾ ಚುನಾವಣೆ ವೇಳೆಗೆ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು. ಇಲ್ಲವಾದರೆ ನಾನು ಬಂಡಾಯ ಏಳುತ್ತೇನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಗೋಕಾಕ್​​​ನಲ್ಲಿ ಮಾತನಾಡಿದ ಅವರು, 74 ಪರ್ಸೆಂಟ್​ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು. ನಮ್ಮ ಸರ್ಕಾರವೇ ಇರಲಿ, ಬೇರೆ ಸರ್ಕಾರವೇ ಇರಲಿ ಬೀಳಿಸುತ್ತೇನೆ ಎಂದು ಹೇಳಿದ್ದಾರೆ.

ಈವರೆಗೂ ನಮಗೆ ಎಲ್ಲರೂ ಮೋಸ ಮಾಡಿದ್ದಾರೆ. ಕುರುಬರು, ಉಪ್ಪಾರ, ಸುಣಗಾರ ಸಮಾಜದವರು ಅಧಿಕಾರಕ್ಕೆ ಬರಬೇಕು. ಒಬಿಸಿಗಿಂತ ಎಸ್​ಟಿಗೆ ಹೆಚ್ಚಿನ ಪ್ರಮಾಣ ಬರಬೇಕು ಎಂಬುದು ನನ್ನ ಬೇಡಿಕೆ. ಕಾಂಗ್ರೆಸ್​ನಲ್ಲಿ 5 ಬಾರಿ, ಬಿಜೆಪಿಯಲ್ಲಿ 2 ಬಾರಿ ಶಾಸಕನಾಗಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ​​​​ ಕೆಟ್ಟದ್ದನ್ನು ಮಾಡಿರಲಿಲ್ಲ. ಒಬ್ಬ ವ್ಯಕ್ತಿಯಿಂದಾಗಿ ಕಾಂಗ್ರೆಸ್ ಪಕ್ಷ ಬಿಟ್ಟೆ ಎಂದು ರಮೇಶ್​ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

 

 

 

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!