ಸಿನಿಮಾ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನ: ಸಚಿವ ಜಮೀರ್‌ ಪುತ್ರ ಜೈದ್ ಖಾನ್‌ಗೆ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರ ವಿವಾದಕ್ಕೆ ಸಿಲುಕಿದ್ದು, ಸಿನಿಮಾ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿ ಚಿತ್ರತಂಡ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

ಕಲ್ಟ್ ಚಿತ್ರ ತಂಡದವರು ಮಾಡಿದ ತಪ್ಪಿಗೆ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಈ ಸಂಬಂಧ ಇದೀಗ ನಟ ಜೈದ್ ಖಾನ್ ಸೇರಿದಂತೆ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ.

ಮೂಲಗಳ ಪ್ರಕಾರ ‘ಕಲ್ಟ್’ ಸಿನಿಮಾದಲ್ಲಿ ಸಂತೋಷ್ ಎಂಬುವವರು ಡ್ರೋನ್ ಉಸ್ತುವಾರಿ ವಹಿಸಿಕೊಂಡಿದ್ದರು. ಚಿತ್ರತಂಡದವರು ಮಾಡಿದ ತಪ್ಪಿಗೆ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿದರು ಎಂದು ಹೇಳಲಾಗಿದೆ.

‘ಕಲ್ಟ್’ ಸಿನಿಮಾದಲ್ಲಿ ಸಂತೋಷ್ ಎಂಬುವವರು ಡ್ರೋನ್ ಉಸ್ತುವಾರಿ ವಹಿಸಿಕೊಂಡಿದ್ದರು. ನ.25ರಂದು ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಒಂದು ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಅವರು ಶೂಟ್ ಮಾಡುತ್ತಿದ್ದರು. ಶೂಟಿಂಗ್ ವೇಳೆ ವಿಂಡ್ ಫ್ಯಾನ್​ಗೆ ಟಚ್ ಆಗಿ ಡ್ರೋನ್ ತುಂಡಾಗಿತ್ತು. ಇದಾದ ಬಳಿಕ ಸಂತೋಷ್​ಗೆ ಚಿತ್ರತಂಡ ಕೊಂಚವೂ ನಷ್ಟ ತುಂಬಿ ಕೊಟ್ಟಿರಲಿಲ್ಲ.

ಈ ಬಗ್ಗೆ ಅವರು ಚಿತ್ರ ತಂಡದ ಬಳಿ ಕೇಳಿಕೊಂಡಿದ್ದರು. ಈ ವೇಳೆ ನಷ್ಟ ಪರಿಹಾರ ಮಾಡದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್​ ಕಿತ್ತುಕೊಂಡಿರುವ ಆರೋಪವನ್ನು ಸಂತೋಷ್ ಮಾಡಿದ್ದಾರೆ.

ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಮಾಗಡಿ ರೋಡ್ ಠಾಣೆಗೆ ಸಂತೋಷ್ ಸಹೋದರಿ ದೂರು ನೀಡಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಂಗಳವಾರ (ಡಿಸೆಂಬರ್ 3) ವಿಚಾರಣೆಗೆ ಬರುವಂತೆ ಚಿತ್ರತಂಡಕ್ಕೆ ಪೊಲೀಸರು ಸೂಚನೆ ನೀಡಿದ್ದು, ವಿಚಾರಣೆಯ ಬಳಿಕ ಪೊಲೀಸರು ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!