Wednesday, December 6, 2023

Latest Posts

ಸೈನಾ ನೆಹ್ವಾಲ್ ಬಗ್ಗೆ ಕೆಟ್ಟ ಜೋಕ್: ಬಹಿರಂಗವಾಗಿ ಕ್ಷಮೆ ಕೇಳಿದ ನಟ ಸಿದ್ಧಾರ್ಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಸಿದ್ಧಾರ್ಥ್ ಬ್ಯಾಡ್ಮಿಂಟರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಬಗ್ಗೆ ಕೆಟ್ಟ ಜೋಕ್ ಮಾಡಿದ್ದಕ್ಕೆ ಕಡೆಗೂ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.
ಮಹಿಳೆಯರ ಗೌರವಕ್ಕೆ ಧಕ್ಕೆ ಬರುವಂತಹ ಆಕ್ಷೇಪಣಾರ್ಹ ಕಮೆಂಟ್ ಒಂದನ್ನು ಸೈನಾ ಬಗ್ಗೆ ಮಾಡಿದ್ದು, ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪತ್ರವೊಂದನ್ನು ಸಿದ್ಧಾರ್ಥ್ ಪೋಸ್ಟ್ ಮಾಡಿದ್ದು, ಹೀಗೆ ಬರೆದಿದ್ದಾರೆ.
ಡಿಯರ್ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್ ಒಂದಕ್ಕೆ ನಾನು ಕೆಟ್ಟದ್ದಾಗಿ ಜೋಕ್ ಮಾಡಿದ್ದೆ. ಅದಕ್ಕೆ ಕ್ಷಮೆ ಕೋರುತ್ತೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸುತ್ತೇನೆ. ಆದರೆ ನಾನು ಬಳಸಿದ ಪದ ಹಾಗೂ ಧಾಟಿಯನ್ನು ಇಲ್ಲಿ ಸಮರ್ಥಿಸಿಕೊಳ್ಳುವುದಿಲ್ಲ. ಒಂದು ಜೋಕ್‌ನ್ನು ಮತ್ತೆ ವಿವರಿಸಬೇಕಾದ ಅಗತ್ಯ ಬಿದ್ದರೆ ಅದು ಕೆಟ್ಟ ಜೋಕ್ ಎಂದೇ ಅರ್ಥ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ನನ್ನ ಪದಗಳು ಹಾಗೂ ಉದ್ದೇಶದಲ್ಲಿ ಕೆಟ್ಟದ್ದಿಲ್ಲ. ಮಹಿಳೆಯರ ಮೇಲೆ ಅಟ್ಯಾಕ್ ಮಾಡುವಂಥ ಜೋಕ್ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಆಗಿದ್ದನ್ನೆಲ್ಲ ಮರೆತು ಕ್ಷಮೆಯನ್ನು ಒಪ್ಪಿಕೊಳ್ಳಿ. ನೀವು ಯಾವಾಗಲೂ ನನ್ನ ಚಾಂಪಿಯನ್ ಎಂದು ಹೇಳಿದ್ದಾರೆ.

ಸೈನಾ ವಿರುದ್ಧ ಸಿದ್ಧಾರ್ಥ್ ಮಾಡಿದ ಟ್ವೀಟ್‌ಗೆ ಸಾಕಷ್ಟು ವಿರೋಧ ಎದುರಾಗಿತ್ತು. ಮಹಿಳಾ ಆಯೋಗ ಕೂಡ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಸಿದ್ಧಾರ್ಥ್ ಕ್ಷಮೆ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!