Tuesday, August 16, 2022

Latest Posts

ಬದಿಯಡ್ಕ ಗ್ರಾಪಂ ಪಟ್ಟಾಜೆ ವಾರ್ಡು ಉಪಚುನಾವಣೆ ಬಿಜೆಪಿ ಅಭ್ಯರ್ಥಿಗೆ ಪೂರ್ಣಾನುಗ್ರಹವಿತ್ತ ಸಾಯಿರಾಂ ಕೃಷ್ಣಭಟ್

ಹೊಸದಿಗಂತ ವರದಿ ಮಂಗಳೂರು:

ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಅವರು ಬದಿಯಡ್ಕ ಗ್ರಾಮಪಂಚಾಯಿತಿ 14ನೇ ವಾರ್ಡು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಹೇಶ್ ವಳಕ್ಕುಂಜ ಅವರಿಗೆ ಸಂಪೂರ್ಣ ಅನುಗ್ರಹವನ್ನಿತ್ತು ಆಶೀರ್ವದಿಸಿದರು. ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಸಮಾಜಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅವರು ರಾಜೀನಾಮೆಯನ್ನು ನೀಡಿ ರಾಜಕೀಯದಿಂದ ಮುಕ್ತರಾಗಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಪಟ್ಟಾಜೆ ವಾರ್ಡು ಉಪಚುನಾವಣೆಯು ಜುಲೈ 21ರಂದು ನಡೆಯಲಿದೆ. ಪಕ್ಷದ ಚುನಾವಣಾ ಸಮಿತಿ ಸಂಚಾಲಕ ವೆಂಕಪ್ಪ ನಾಯ್ಕ ಮಾನ್ಯ, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರು, ಹಿರಿಯ ಕಾರ್ಯಕರ್ತ ವೆಂಕಟ್ರಮಣ ಚುಕ್ಕಿನಡ್ಕ ಮೊದಲಾದವರು ಜೊತೆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss