ಅದ್ಧೂರಿಯಾಗಿ ನೆರವೇರಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ನಿಶ್ಚಿತಾರ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ.

ಪೋಸೆಡೆಕ್ಸ್ ಟೆಕ್ನಾಲಜೀಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ವೆಂಕಟ ದತ್ತ ಸಾಯಿ ಜೊತೆ ಸಿಂಧೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದೀಗ ನಿಶ್ಚಿತಾರ್ಥ ಫೋಟೋಗಳು ವೈರಲ್ ಆಗಿದೆ.

ಹೈದರಾಬಾದ್‌ನಲ್ಲಿ ಇಂದು(ಡಿ.14) ನಡೆದ ಅದ್ಧೂರಿ ನಿಶ್ಚಿತಾರ್ಥದ ಸಮಾರಂಭದಲ್ಲಿ ಪಿವಿ ಸಿಂಧೂ ಹಾಗೂ ವೆಂಕಟ ದತ್ತ ಸಾಯಿ ರಿಂಗ್ ಬದಲಾಯಿಸಿದ್ದಾರೆ. ಪಿವಿ ಸಿಂಧೂ ಲೆಹಂಗ ಧರಿಸಿ ಮಿಂಚಿದ್ದಾರೆ. ಇದೇ ವೇಳೆ ಸಿಂಧೂ ನಿಶ್ಚಾರ್ಥ ಕಾರ್ಯಕ್ರಮದಲ್ಲಿ ಮಿಸ್‌ನಿಂದ ಮಿಸೆಸ್ ಬ್ಯಾನರ್ ಸಮಾರಂಭದ ಮೆರುಗು ಹೆಚ್ಚಿಸಿತ್ತು.

ಡಿಸೆಂಬರ್ 22ರಂದು ಪಿವಿ ಸಿಂಧೂ ವಿವಾಹ ಮಹೋತ್ಸವ ನಡೆಯಲಿದೆ. ಉದಯಪುರದಲ್ಲಿ ಈ ಸಮಾರಂಭ ನಡೆಯಲಿದೆ. ಡಿಸೆಂಬರ್ 20 ರಿಂದ ಮದುವೆ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಮಹೆಂದಿ, ಸಂಗೀತ್ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ಉದಯಪುರದಲ್ಲಿ ನಡೆಯಲಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ಹಲವು ಗಣ್ಯರನ್ನು ಆಹ್ವಾನಿಸಿದೆ.

ಡಿಸೆಂಬರ್ 22ರಂದು ಉದಯಪುರದಲ್ಲಿ ಮದುವೆ ನಡೆದರೆ, ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಹೈದರಾಬಾದ್‌ನ ಖಾಸಗಿ ಹೊಟೆಲ್‌ನಲ್ಲಿ ಅದ್ಧೂರಿ ರಿಸೆಪ್ಶನ್ ಕಾರ್ಯಕ್ರಮ ನಡೆಯಲಿದೆ ಎಂದು ಪಿವಿ ಸಿಂಧೂ ತಂದೆ ಪಿವಿ ರಮಣ ಹೇಳಿದ್ದಾರೆ.

ಮದುವೆಯಾದ ಬೆನ್ನಲ್ಲೇ ಪಿವಿ ಸಿಂಧೂ ಪ್ರತಿಷ್ಠಿತ ಟೂರ್ನಿಗೆ ತಯಾರಿ ಆರಂಭಿಸಲಿದ್ದಾರೆ. ಕಾರಣ ಮಲೇಷಿಯಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಪಿವಿ ಸಿಂಧೂ ಪಾಲ್ಗೊಳ್ಳಬೇಕಿದೆ. ಜನವರಿ 7 ರಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಹೀಗಾಗಿ ಪಿವಿ ಸಿಂಧೂ ಮದುವೆ ಹಾಗೂ ರಿಸೆಪ್ಶನ್ ಬೆನ್ನಲ್ಲೇ ಮಲೇಷಿಯಾ ಟೂರ್ನಿಗೆ ಸಜ್ಜಾಗಲಿದ್ದಾರೆ ಎಂದು ಪಿವಿ ರಮಣ ಹೇಳಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!