ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾರ್ ಧಾಮ್ ಯಾತ್ರೆಯಲ್ಲಿ ಒಂದಾದ ಬದರಿನಾಥ ದೇವಾಲಯವನ್ನು ತೆರೆಯಲಾಗಿದೆ. ಈಗಾಗಲೇ ಯಾತ್ರೆಗಳಲ್ಲಿ ಒಂದಾದ ಕೇದಾರನಾಥ ದೇವಾಲಯವನ್ನು ಏಪ್ರಿಲ್ 25 ರಂದು ತೆರೆಯಲಾಗಿದೆ. ಈ ಸಂದರ್ಭದಲ್ಲಿ ಇಂದು ಬೆಳಗ್ಗೆ 7.10ಕ್ಕೆ ಬದರಿನಾಥ ದೇವಾಲಯವನ್ನು ತೆರೆಯಲಾಯಿತು. ಮಾರಿಗೋಲ್ಡ್ ಹೂಗಳಿಂದ ಅಲಂಕೃತವಾಗಿರುವ ಬದರಿನಾಥ ದೇವಾಲಯವನ್ನು ನೋಡಿದ ಭಕ್ತರು ಭಾವಪರವಶರಾಗಿದ್ದಾರೆ.
ಉತ್ತರಾಖಂಡದ ಬದರಿನಾಥ ದೇವಾಲಯವನ್ನು ಗುರುವಾರ (ಏಪ್ರಿಲ್ 27, 2023) ಬೆಳಿಗ್ಗೆ ತೆರೆಯಲಾಯಿತು. ಚಾರ್ಧಾಮ್ ಯಾತ್ರೆಯ ಅಂಗವಾಗಿರುವ ಬದರಿನಾಥ ದೇವಾಲಯದಲ್ಲಿ ಇಂದಿನಿಂದ ಭಕ್ತರಿಗೆ ದರ್ಶನ ಆರಂಭವಾಗಿದೆ. ಬೆಳಗ್ಗೆ 7.10ಕ್ಕೆ ದೇಗುಲ ತೆರೆಯುತ್ತಿದ್ದಂತೆಯೇ ಸ್ವಾಮಿಯ ದರ್ಶನಕ್ಕಾಗಿ ಕಾದು ಕುಳಿತಿದ್ದ ಭಕ್ತರು ಬದರಿನಾಥನ ದರ್ಶನ ಪಡೆದರು.
ಚಾರ್‌ಧಾಮ್‌ನ ಭಾಗವಾಗಿರುವ ಬದರಿನಾಥ ಕ್ಷೇತ್ರಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ದೇವಸ್ಥಾನ ತೆರೆದಾಗ ಭಕ್ತರು ದೇವರ ದರ್ಶನಕ್ಕೆ ಕಾಯುತ್ತಾರೆ. ದೇವಸ್ಥಾನದ ದರ್ಶನದ ವೇಳೆ ಸುಮಾರು 15 ಕ್ವಿಂಟಾಲ್ ಹೂಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಸಂಘಟಕರು ಜೈ ಬದ್ರಿ, ಸೇನಾ ಬ್ಯಾಂಡ್ ಘೋಷಗಳ ನಡುವೆ ದೇವಸ್ಥಾನವನ್ನು ತೆರೆದರು.