ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಪುತ್ರ ನಿರ್ದೇಶದ ಆರ್ಯನ್ ಖಾನ್ ದಿ ಬ್ಯಾಡ್ಸ್ ಆಫ್ ಬಾಲಿವುಡ್ ವೆಬ್‌ಸೀರೀಸ್‌ನ್ನು ರಿಲೀಸ್ ಮಾಡಿದ್ದರು. ಇದೀಗ ಈ ಸೀರಿಸ್‌ನ ಎರಡನೇ ಸೀಸನ್ ಶೂಟಿಂಗ್ ಶೀಘ್ರವೇ ಆರಂಭವಾಗಲಿದೆ.
ಹೌದು, ಈ ಬಗ್ಗೆ ಖುದ್ದು ಆರ್ಯನ್ ಖಾನ್ ಮಾಹಿತಿ ನೀಡಿದ್ದು, ಮುಂದಿನ ವರ್ಷದ ಮಾರ್ಚ್‌ನಿಂದ ಶೂಟಿಂಗ್ ಆರಂಭ ಮಾಡುತ್ತೇವೆ. ಮೊದಲ ಸೀಸನ್‌ನಲ್ಲಿ ಇದ್ದವರೇ ಈ ಸೀಸನ್‌ನಲ್ಲಿಯೂ ಇರಲಿದ್ದಾರೆ. ಜೊತೆಗೆ ಹೊಸ ಕ್ಯಾರೆಕ್ಟರ್‌ಗಳ ಸೇರ್ಪಡೆ ಆಗಲಿದೆ ಎಂದು ಹೇಳಿದ್ದಾರೆ.
ಮೊದಲ ಸೀಸನ್‌ನಲ್ಲಿ, ಬಾಲಿವುಡ್‌ನಲ್ಲಿ ಬಹುದೊಡ್ಡ ಸ್ಟಾರ್ ಆಗುವ ಕನಸು ಹೊತ್ತ ಆಸ್ಮಾನ್ ಎಂಬ ಯುವಕ ಹೇಗೆ ಫೀಲ್ಡ್‌ನಲ್ಲಿ ಸರ್ವೈವ್ ಆಗುತ್ತಾನೆ. ಬಹುದೊಡ್ಡ ನಟನ ಮಗಳ ಪ್ರೀತಿಯಲ್ಲಿ ಬಿದ್ದು, ಕರಿಯರ್‌ನಲ್ಲಿ ಏಳು ಬೀಳುಗಳನ್ನು ಅನುಭವಿಸುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಮೊದಲ ಬಾರಿಗೆ ಡೈರೆಕ್ಟರ್ ಆಗಿರುವ ಆರ್ಯನ್ ಖಾನ್ ತಮ್ಮ ಜಾಣ್ಮೆಯಿಂದ ಜನರನ್ನು ಹಿಡಿದಿಟ್ಟುಕೊಂಡಿದ್ದಾರೆ. ಬಾಲಿವುಡ್‌ನ ರಿಯಲ್ ಇನ್ಸಿಡೆಂಟ್‌ಗಳನ್ನು ವ್ಯಂಗ್ಯವಾಗಿ ತೋರಿಸಿ ಜನರಿಗೆ ಹತ್ತಿರವಾಗಿದ್ದಾರೆ. ಈ ಸೀರೀಸ್‌ನಲ್ಲಿ ಫೈಟಿಂಗ್, ರೊಮ್ಯಾನ್ಸ್, ಹಾಸ್ಯ ಎಲ್ಲವೂ ಇದೆ.
ಈ ವೆಬ್ ಸರಣಿಯಲ್ಲಿ ಲಕ್ಷ್ಯ, ಬಾಬಿ ಡಿಯೋಲ್, ಸಹೇರ್ ಬಾಂಬಾ, ರಾಘವ್ ಜುಯಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಅನ್ಯಾ ಸಿಂಗ್, ಮೋನಾ ಸಿಂಗ್, ಮನೋಜ್ ಪಹ್ವಾ, ಮನೀಶ್ ಚೌಧರಿ ಹಾಗೂ ರಜತ್ ಬೇಡಿ ಕೂಡ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದರು. ಇವರ ಪೈಕಿ ಬಹುತೇಕರು ಎರಡನೇ ಭಾಗದಲ್ಲಿ ಇರಲಿದ್ದಾರೆ. ಪ್ರಸ್ತುತ ಈ ಸರಣಿಯ ಎರಡನೇ ಭಾಗದ ಸ್ಕ್ರಿಪ್ಟ್ ಕೆಲಸಗಳು ಭರದಿಂದ ಸಾಗುತ್ತಿವೆ.



