ಉಕ್ರೇನ್‌ ನಲ್ಲಿ‌ ಬಾಗಲಕೋಟೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 

ಹೊಸ ದಿಗಂತ ವರದಿ, ಬಾಗಲಕೋಟೆ:

ಉಕ್ರೇನ್‌ ನಲ್ಲಿ‌ ಯುದ್ದ ಕಾರ್ಮೋಡ ಉದ್ಭವಿಸಿದ್ದು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸಿಲುಕಿದ್ದಾರೆ.
ಬಾಗಲಕೋಟೆ ವಿದ್ಯಾಗಿರಿಯ ನಿವಾಸಿಯಾಗಿರುವ ಮನೋಜಕುಮಾರ ಚಿತ್ರಗಾರ(20) ಎಮ್ಬಿಬಿಎಸ್ ಪ್ರಥಮ ವರ್ಷ ಅಧ್ಯನಕ್ಕೆಂದು ಡಿಸೆಂಬರ್ 10ಕ್ಕೆ ಉಕ್ರೇನ್ಗೆ ತೆರಳಿದ್ದಾರೆ. ಕಾರ್ಕೇವ್ ನ್ಯಾಷನಲ್ ಮೆಡಿಕಲ್ 0ುುನಿವರ್ಸಿ ಟಿಯಲ್ಲಿ ಎಮ್ಬಿಬಿಎಸ್ ಅಧ್ಯಯನ ಮಾಡುತ್ತಿದ್ದಾರೆ.

ಫೆಬ್ರುವರಿ 28 ಕ್ಕೆ ಭಾರತಕ್ಕೆ ಬರಲು ಮನೋಜಕುಮಾರ ಪ್ಲೈಟ್ ಬುಕ್ ಮಾಡಿದ್ದರು. ಆದರೆ ಈಗ ಉಕ್ರೇನ್ದಲ್ಲಿ ಯುದ್ದದ ಕಾರ್ಮೋಡ ಆವರಿಸಿದ್ದರಿಂದ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.

ಮನೋಜಕುಮಾರ ತಂದೆ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ ಮಧ್ಯಾಹ್ನ ಮಗ ಮನೋಜಕುಮಾರ ಪೋನ್ ಮೂಲಕ ಮಾತನಾಡಿದ್ದು ಸಧ್ಯ ಹಾಸ್ಟೇಲ್ದಲ್ಲಿದ್ದೇವೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಪಾಲಕರಿಗೆ ಧೈರ್ಯದ ನುಡಿಗಳನ್ನು ಆಡಿದ್ದಾರೆ.

ಉಕ್ರೇನ್‌ ನಲ್ಲಿ‌ ಎಂಬಿಬಿಎಸ್ ಓದುತ್ತಿರುವ ಇನ್ನೋರ್ವ ವಿದ್ಯಾರ್ಥಿ ಅಪೂರ್ವ  ಕದಾಂಪೂರ ತಾಯಿಯೊಂದಿಗೆ ವಿಡಿಯೋ ಕಾಲ ಮೂಲಕ ಮಾತನಾಡಿ ಅಲ್ಲಿಯ ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದ್ದಾರೆ.  ಉಕ್ರೇನ್ದಲ್ಲಿ ಕ್ರಿಟಿಕಲ್ ಸ್ಥಿತಿ ಇದೆ. ಬೆಳಿಗ್ಗೆ ಬಾಂಬ್ ಬ್ಲಾಸ್ಟ್ ಆಗಿದೆ. ನಾವಿರುವ ಸ್ಥಳ ರಷ್ಯಾ ದೇಶಕ್ಕೆ 25 ಕಿ.ಮೀ ಅಂತರದ ಗಡಿಭಾಗದಲ್ಲಿದ್ದೇವೆ. ಉಕ್ರೇನ್ ಎಟಿಎಂದಲ್ಲಿ ದುಡ್ಡು ಸಹ ಹೆಚ್ಚಾಗಿ ಸಿಗುತ್ತಿಲ್ಲ. ಊಟಕ್ಕಾಗಿ ಆಹಾರ ಕೂಡ ಸಂಗ್ರಹ ಮಾಡಿಕೊಳ್ಳುವ ಸ್ಥಿತಿ ಇದೆ ಸಧ್ಯಕ್ಕೆ ನಾವು ಚೆನ್ನಾಗಿದ್ದೇವೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಾಯಿ ಜ್ಯೋತಿಯವರೊಂದಿಗೆ ಮಗಳು ಅಪೂರ್ವ ಮಾತನಾಡಿದ್ದಾರೆ.

ಏನಾದರೂ ಸ್ಥಿತಿ ಕೆಟ್ಟರೆ ಸೈರನ್ ಆಗುತ್ತೆ ಎಲ್ಲರೂ ಮೆಟ್ರೋ ಸ್ಟೇಶನ್ ಬಳಿ ಬಂದು ಕೂಡಬೇಕು ಎಂದು ಎಚ್ಚರಿಕೆಯ ಸಂದೇಶವನ್ನು ಸಹ ಪದೇ ಪದೇ ನೀಡಲಾಗುತ್ತದೆ ಎಂದು ಅಪೂರ್ವ ಪಾಲಕರಿಗೆ ತಿಳಿಸಿದ್ದರಿಂದ ಇಲ್ಲಿ ಪಾಲಕರು ಆತಂಕ ಪಡುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!