ಹೊಸದಿಗಂತ ವರದಿ, ಬಾಗಲಕೋಟೆ:
ಜಿಲ್ಲೆಯ ಬೀಳಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದುಕೊಂಡು ಮಾರಾಟಕ್ಕಾಗಿ ಶೇಕರಿಸಿಟ್ಟ 15,12,000 ರೂ. ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿದ್ದಾಪೂರ ಗ್ರಾಮದ ಡೋಂಗ್ರಿಸಾಬ ಬಾಬಾಸಾಬು ಉರ್ಪ ಬಾವಾಸಾಬ ಅರಮನಿ (53) ಎಂಬವನು ತಮ್ಮ ಜಮೀನಿನಲ್ಲಿ 198 ಕೆ.ಜಿ. ಗಾಂಜಾ ( ಮೌಲ್ಯ 15,12,000 ರೂ.) ವನ್ನು ಬೆಳೆದು ಮಾರಾಟಕ್ಕೆ ಅಕ್ರಮವಾಗಿ ಶೇಕರಿಸಿಟ್ಟಿದ್ದನ್ನು ಖಚಿತ ಪಡಿಸಿಕೊಂಡ ಬೀಳಗಿ ಪೊಲೀಸ್ ಠಾಣಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸಾರ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಅಕ್ರಮ ಗಾಂಜಾ ಮಾಧಕ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ