ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ನಡೆದ ಆಡಿಲೇಡ್ ಅಂತಾರಾಷ್ಟ್ರೀಯ ಟೆನಿಸ್ ಕೂಟದ ಡಬಲ್ಸ್ ಪಂದ್ಯಾವಳಿಯಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ರಾಮ್ ಕುಮಾರ್ ಜೋಡಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದಾರೆ.
ಫೈನಲ್ಸ್ ನಲ್ಲಿ ಈ ಜೋಡಿ ಕ್ರೋವೇಶಿಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್ ನ ಮಾರ್ಸೆಲೋ ಮೆಲೋ ವಿರುದ್ದ 7-6 (), 6-1 ಅಂತರದಲ್ಲಿ ಜಯ ಗಳಿಸಿದ್ದಾರೆ.
ಸತತ ಒಂದು ಗಂಟೆಗಳ ಕಾಲ ನಡೆದ ಈ ಫಿನಾಲೆ ಪಂದ್ಯಾವಳಿಯಲ್ಲಿ ಬೋಪಣ್ಣ ಅಮೋಘ ಪ್ರದರ್ಶನ ನೀಡಿದರು. ಇನ್ನು ರಾಮ್ ಕುಮಾರ್ ಅವರು ಅದ್ಭುತ ಆಲ್ ರೌಂಡರ್ ಆಗಿ ಹೋರಾಡುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದ ಗೆಲುವಿನಿಂದ ಭಾರತದ ಈ ಜೋಡಿಗೆ 18700 ಡಾಲರ್ ಬಹುಮಾನ ನೀಡಲಾಗಿದೆ.