ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾಗಮತಿ ಎಕ್ಸ್‌ಪ್ರೆಸ್ ರೈಲು ದುರಂತ ನಡೆದ ಜಾಗದಲ್ಲಿ ಹಳಿಗಳ ತೆರವು ಕಾರ್ಯಚರಣೆ ಸತತ 18 ಗಂಟೆಗಳ ಬಳಿಕ ಯಶಸ್ವಿಯಾಗಿ ಹೊಸ ಟ್ರ್ಯಾಕ್ ನಿರ್ಮಾಣ ಮಾಡಿ, ಎಂದಿನಂತೆ ರೈಲು ಓಡಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಅಪಘಾತದ ಬಳಿಕ ಹಳಿಗಳ ಮೇಲೆ ಬಿದ್ದಿದ್ದ ಎಲ್ಲಾ ಬೋಗಿಗಳನ್ನ ಸಂಪೂರ್ಣವಾಗಿ ರೈಲ್ವೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಗೂಡ್ಸ್ ರೈಲಿಗೆ ಭಾಗಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು, 13 ಬೋಗಿಗಳು ಹಳಿ ತಪ್ಪಿದ್ದವು. ಇದೀಗ ಸತತ 18 ಘಂಟೆಗಳ ಬಳಿಕ ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳನ್ನ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.