ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಇಂದು ಉತ್ತರ ಕರ್ನಾಟಕದ ಆದಿಶಕ್ತಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆಯಲಿದ್ದಾರೆ.
ಮುಡಾ ಸಂಕಷ್ಟದ ತೊಂದರೆಯಿಂದ ಮುಕ್ತಿ ಹೊಂದಲು ಸಿಎಂ ಆದಿಶಕ್ತಿಯ ಮೊರೆ ಹೋಗಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
1:30ಕ್ಕೆ ಸವದತ್ತಿಗೆ ಸಿಎಂ ಆಗಮಿಸಲಿದ್ದಾರೆ. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ ನಂತರ ರಸ್ತೆ ಮಾರ್ಗವಾಗಿ ಸವದತ್ತಿ ತಲುಪಲಿದ್ದಾರೆ.