ಸುಕೇಶ್​ ಚಂದ್ರಶೇಖರ್​ಗೆ ಜಾಮೀನು: ಆದ್ರೂ ಜೈಲಿನಿಂದ ಸದ್ಯಕ್ಕೆ ಇಲ್ಲ ರಿಲೀಸ್ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಐಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿ ಆರೋಪಿ ಸುಕೇಶ್​ ಚಂದ್ರಶೇಖರ್​ಗೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.

ಸುಕೇಶ್​ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರಿದ್ದ ವಿಶೇಷ ಪೀಠವು ವಾದ-ಪ್ರತಿವಾದವನ್ನು ಆಲಿಸಿದ ಬಳಿಕ 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್​ಅನ್ನು ಶ್ಯೂರಿಟಿ ಇರಿಸಿಕೊಂಡು ಜಾಮೀನು ಮಂಜೂರು ಮಾಡಿದ್ದಾರೆ.

ಎಐಎಡಿಎಂಕೆ ಪಕ್ಷದ ಚಿಹ್ನೆಯನ್ನು ವಿ.ಕೆ. ಶಶಿಕಲಾ ಅವರ ಬಣಕ್ಕೆ ಕೊಡಿಸುವ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಯೊಬ್ಬರಿಗೆ ಲಂಚ ಆಮಿಷ ಒಡ್ಡಲಾಗಿತ್ತು. ಈ ವಿಚಾರವಾಗಿ ಸುಖೇಶ್​ ಮಧ್ಯಸ್ಥಿಕೆ ವಹಿಸಿದ್ದ ಎಂದು ವರದಿಯಾಗಿದೆ.

ಆದ್ರೆ ಬೇಲ್​ ಸಿಕ್ಕರೂ ಸದ್ಯಕ್ಕೆ ಸುಕೇಶ್​ ಹೊರಬರಲು ಸಾಧ್ಯವಿಲ್ಲ. ಏಕೆಂದರೆ ಬೇರೆ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಅವುಗಳ ವಿಚಾರಣೆ ನಡೆದ ಬಳಿಕ ಸುಕೇಶ್​ ಹೊರಬರಲಿದ್ದಾರಾ ಎಂಬುದು ತಿಳಿಯಲಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!