ಅವಧಿಬದ್ಧ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಬಜಾಜ್‌ ಫೈನಾನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಸಾಲ ನೀಡುವ ಅಂಗವಾದ ಬಜಾಜ್ ಫೈನಾನ್ಸ್, ಅವದಿಬದ್ಧ ಠೇವಣಿ (Fixed Deposit)ಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. 15 ತಿಂಗಳು ಮತ್ತು 23 ತಿಂಗಳುಗಳ ನಡುವಿನ ಅವಧಿಬದ್ಧ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 35 ಮೂಲಾಂಶಗಳ ವರೆಗೆ ಹೆಚ್ಚಿಸುವುದಾಗಿ ಬಜಾಜ್‌ ಫೈನಾನ್ಸ್‌ ಘೋಷಿಸಿದ್ದು ಈ ಏರಿಕೆಯು ಇಂದಿನಿಂದಲೇ(ಮಾ.4) ಜಾರಿಗೆ ಬರಲಿದೆ ಎನ್ನಲಾಗಿದೆ.

ಈ ಏರಿಕೆಯ ನಂತರ ಹಿರಿಯ ನಾಗರಿಕರು 44 ತಿಂಗಳ ಉಳಿತಾಯದ ಮೇಲೆ ವಾರ್ಷಿಕವಾಗಿ ಶೇಕಡಾ 8.20 ವರೆಗೆ ಬಡ್ಡಿದರವನ್ನು ಪಡೆಯಬಹುದಾಗಿದೆ. 60 ವರ್ಷಕ್ಕಿಂತ ಕೆಳಗಿನ ಠೇವಣಿದಾರರು ವರ್ಷಕ್ಕೆ 7.95 ಪ್ರತಿಶತದವರೆಗೆ ಗಳಿಸಬಹುದಾಗಿದೆ. ಬಜಾಜ್ ಫೈನಾನ್ಸ್ ಕಳೆದ ವರ್ಷ ಪರಿಚಯಿಸಿದ 33 ತಿಂಗಳ ವಿಶೇಷ ಅವಧಿಯ ಉಳಿತಾಯದ ಮೇಲೆ, ಹಿರಿಯ ನಾಗರಿಕರಲ್ಲದವರು ವಾರ್ಷಿಕವಾಗಿ 7.75 ಪ್ರತಿಶತದಷ್ಟು ಎಫ್‌ ಡಿ ಬಡ್ಡಿದರಗಳನ್ನು ಪಡೆಯಬಹುದು ಮತ್ತು ಹಿರಿಯ ನಾಗರಿಕರು ವಾರ್ಷಿಕವಾಗಿ 8.00 ಪ್ರತಿಶತದವರೆಗೆ ಗಳಿಸಬಹುದು ಎಂದು ಬಜಾಜ್ ಫೈನಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಅವಧಿಬದ್ಧ ಠೇವಣಿ ಮತ್ತು ಹೂಡಿಕೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಚಿನ್ ಸಿಕ್ಕಾ ಈ ಕುರಿತು ಪ್ರತಿಕ್ರಿಯಿಸಿದ್ದು “ಪ್ರಸ್ತುತ ಬಡ್ಡಿದರದ ಪರಿಷ್ಕರಣೆಯು ಹೂಡಿಕೆದಾರರಿಗೆ ಹೆಚ್ಚಿನ ಅವಧಿಬದ್ಧ ಠೇವಣಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಠೇವಣಿಗಳ ಪಟ್ಟಿಯಲ್ಲಿ 44-ತಿಂಗಳ ಸ್ಥಿರ ಠೇವಣಿಗಳ ಮೇಲಿನ ನಮ್ಮ ಪರಿಷ್ಕೃತ ಬಡ್ಡಿದರಗಳು ಶೇಕಡಾ 8.20 ರಷ್ಟಿದ್ದು, ಹೂಡಿಕೆದಾರರು ಹಣದುಬ್ಬರ ಮತ್ತು ದ್ರವ್ಯತೆಯಿಂದ ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!