ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರು ನಗರದ ಬಸ್ಸು ನಿಲ್ದಾಣದ ಬಳಿಯ ಹೊಟೇಲ್ ಒಂದರಲ್ಲಿ ಭಿನ್ನಮತೀಯ ಜೋಡಿಯೊಂದು ಜತೆಯಾಗಿ ಕುಳಿತು ಜ್ಯೂಸ್ ಕುಡಿಯುತ್ತಿದ್ದ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಇಬ್ಬರನ್ನೂ ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಇಬ್ಬರೂ ಶಿವಮೊಗ್ಗ ಮೂಲದವರು ಎನ್ನಲಾಗಿದ್ದು, ಯುವತಿ ನಗರದ ಪಿ.ಜಿ.ಯೊಂದರಿoದ ಕಾಲೇಜಿಗೆ ತೆರಳುತ್ತಿರುವ ಮಾಹಿತಿ ಲಭ್ಯವಾಗಿದೆ. ಬಳಿಕ ಬಜರಂಗದಳದವರು ಹಾಗೂ ಬಿಜೆಪಿ ಮುಖಂಡರ ನಿಯೋಗ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ಪೊಲೀಸರು ಇಬ್ಬರ ಮನೆಯವರಿಗೆ ಮಾಹಿತಿ ನೀಡಿ ವಿಚಾರಣೆ ಮುಂದುವರೆಸಿದ್ದಾರೆ.