ದಿಗಂತ ವರದಿ ಮಂಗಳೂರು:
ನಗರದ ಲೇಡಿಹಿಲ್ ಬಳಿ ನವೀಕರಣಗೊಳ್ಳುತ್ತಿರುವ ವೃತ್ತಕ್ಕೆ ಬಜರಂಗದಳದ ವತಿಯಿಂದ `ನಾರಾಯಣ ಗುರು ವೃತ್ತ’ ಎಂಬ ನಾಮಫಲಕವನ್ನು ಅಳವಡಿಸಲಾಗಿದೆ.
ಲೇಡಿಹಿಲ್ ವೃತ್ತಕ್ಕೆ `ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ವೆಂದು ನಾಮಕರಣ ಮಾಡಬೇಕು ಎಂದು ಕಳೆದ ಹಲವು ಸಮಯದಿಂದ ಒತ್ತಾಯವಿದ್ದು, ಪಾಲಿಕೆ ಸಾಮಾನ್ಯ ಸಭೆಯಲ್ಲೂ ಚರ್ಚೆಗೆ ಬಂದಿತ್ತು.ಈ ನಡುವೆ ಬಜರಂಗದಳ ಬುಧವಾರ `ನಾರಾಯಣ ಗುರು’ ವತ್ತ ಎಂಬ ನಾಮಫಲಕವನ್ನು ಅಳವಡಿಸಿದೆ. ನಾಮಫಲಕ ಅಳವಡಿಸುವ ವೇಳೆ ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಪ್ರಮುಖರಾದ ಪ್ರದೀಪ್ ಸರಿಪಳ್ಳ, ಚೇತನ್ ಪೂಜಾರಿ ಅಸೈಗೋಳಿ, ಗುರುಪ್ರಸಾದ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.