ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್ ಅಭಿನಯದ ‘ಪಠಾನ್’ ಚಿತ್ರದ ಹಾಡು ‘ಬೇಷರಂ ರಂಗ್’ ಬಿಡುಗಡೆಯಾದಾಗಿನಿಂದ ವಿವಾದಕ್ಕೆ ಸಿಲುಕಿದೆ. ವಿಶ್ವ ಹಿಂದೂ ಪರಿಷತ್ತಿನ (ವಿಎಚ್ಪಿ) ಭಾಗವಾಗಿರುವ ಭಜರಂಗದಳದ ಸದಸ್ಯರು ಅಹಮದಾಬಾದ್ನ ವಸ್ತ್ರಪುರದ ಆಲ್ಫಾ ಒನ್ ಮಾಲ್ನಲ್ಲಿ ಚಿತ್ರದ ಪ್ರಚಾರದ ವೇಳೆ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಶಾರುಖ್ ಖಾನ್ ಮತ್ತು ಅವರ ಸಹ-ನಟರ ಚಿತ್ರಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಚಿತ್ರವನ್ನು ಬಿಡುಗಡೆ ಮಾಡಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಮಾಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿಎಚ್ಪಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುವುದು ಮತ್ತು ಪೋಸ್ಟರ್ಗಳನ್ನು ಹರಿದು ಹಾಕುವುದು ಮತ್ತು ಪಠಾಣ್ನ ತಾರಾವರ್ಗದ ದೊಡ್ಡ ಕಟೌಟ್ಗಳನ್ನು ಕಿತ್ತೆಸೆದಿರುವ ದೃಶ್ಯಗಳನ್ನು ನೋಡಬಹುದು.
ಪ್ರತಿಭಟನಾಕಾರರು ಪಠಾಣ ಚಿತ್ರವನ್ನು ಬಿಡುಗಡೆ ಮಾಡದಂತೆ ಒತ್ತಾಯಿಸಿ ಥಿಯೇಟರ್ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿದರು.
ಪಠಾಣ್ ಚಿತ್ರ ಬಿಡುಗಡೆಯಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು, ಚಿತ್ರ ಬಿಡುಗಡೆ ಮಾಡದಿರುವ ಬಗ್ಗೆ ಐನಾಕ್ಸ್ ಥಿಯೇಟರ್ ಆಡಳಿತ ಮಂಡಳಿಗೂ ಮನವಿ ಸಲ್ಲಿಸಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.