ನಾರಾ ಭರತ್ ರೆಡ್ಡಿಗೆ ಬಳ್ಳಾರಿ ನಗರ ಕ್ಷೇತ್ರದ ಕೈ ಟಿಕೆಟ್ ?

ಹೊಸದಿಗಂತ ವರದಿ, ಬಳ್ಳಾರಿ:

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಕಗ್ಗಂಟಾಗಿ ಉಳಿದಿದೆ. ಬಿಜೆಪಿಯಿಂದ ಹಾಲಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರಿಗೆ ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಆಕಾಂಕ್ಷೆಗಳ ಪಟ್ಟಿ ದೊಡ್ಡದಿದ್ದರೂ ಅಂತಿಮವಾಗಿ ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್.ಆಂಜಿನೇಯಲು ಹಾಗೂ ಜಿ.ಪಂ.ಮಾಜಿ ಸದಸ್ಯ ನಾರಾ ಭರತ್ ರೆಡ್ಡಿ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಧ್ಯಸ್ಥಿಕೆಯಿಂದ ನಾರಾ ಭರತ್ ರೆಡ್ಡಿ ಅವರಿಗೆ ಅದೃಷ್ಟ ಖುಲಾಯಿಸಿದೆ ಎಂದು ಹೇಳಲಾಗುತ್ತಿದೆ. ಮಂಗಳವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ನಗರದ ಕಾಂಗ್ರೆಸ್ ಟಿಕೇಟ್ ಪ್ರಭಲ ಆಕಾಂಕ್ಷಿಗಳಾದ ನಾರಾ ಭರತ್ ರೆಡ್ಡಿ ಹಾಗೂ ಜೆ.ಎಸ್. ಆಂಜನೇಯಲು ಅವರೊಂದಿಗೆ ಚೆರ್ಚಿಸಿದರು ಎಂದು ಹೇಳಲಾಗುತ್ತಿದೆ. ಇಬ್ಬರೂ ನಾಯಕರನ್ನು ವಿಮಾನ ನಿಲ್ದಾಣಕ್ಕೆ ಅವರು ಡಿಕೇಶಿ ಕರೆಸಿ ಇಬ್ಬರ ಮಧ್ಯೆ ಸಂಧಾನ ನಡೆಸಿದ್ದಾರೆ ಎನ್ನುವುದು ನಾನಾ ಚೆರ್ಚೆಗೆ ಗ್ರಾಮವಾಗಿದೆ. ನಾರಾ ಭರತ್ ರೆಡ್ಡಿಗೆ ಟಿಕೇಟ್ ಅಂತಿಮವಾಗಲಿದೆ ಎಂದು ಹೇಳಲಾಗುತ್ತಿದ್ದು, ಅವರ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ. ಇಂದಿನ ಬೆಳವಣಿಗೆ ಇಲ್ಲಿವರೆಗೆ ಇದ್ದ ಗೊಂದಲ, ಆತಂಕಗಳಿಗೆ ಒಂದಿಷ್ಡು ತೆರೆ ಎಳೆದಂತಾಗಿದೆ ಎಂದು ಹೇಳಬಹುದು. ಜೆ.ಎಸ್.ಆಂಜನೇಯಲು ಅವರಿಗೆ ಎಂಎಲ್‌ಸಿ ಸ್ಥಾನದ ಭರವಸೆ ನೀಡಿದ್ದಾರೆ.

ಆದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ನಿಮ್ಮನ್ನು ಕರೆಸಿ ಮಾತನಾಡಿರುವೆ. ನಿಮ್ಮಿಬ್ಬರಲ್ಲಿ ಯಾರಿಗೇ ಟಿಕೆಟ್ ಬಂದರೂ ಪರಸ್ಪರ ಎದುರಾಳಿಯಂತೆ‌ ವರ್ತಿಸದೇ ಇಬ್ಬರೂ ಕೂಡಿ ಚುನಾವಣೆ ಎದುರಿಸಿ ದಾಖಲೆ ಮತಗಳ ಅಂತರಗಳಲ್ಲಿ ಗೆಲುವು ಸಾಧಿಸಬೇಕು, ಪಕ್ಷೇತರರಾಗಿ ಸ್ಪರ್ಧೆ ಹಾಗೆ ಹೀಗೆ ಎಂದು ಹೇಳಕೂಡದು, ಇಂದು ಅಥವಾ ನಾಳೆ ಟಿಕೆಟ್ ಘೋಷಣೆಯಾಗಲಿದೆ ಎಂದು ಡಿಕೇಶಿ‌ ಭರವಸೆ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದೃಷ್ಟ ಯಾರ ಪಾಲಿಗೆ ಒಲಿದು ಬರಲಿದೆ ಕಾದುನೋಡಬೇಕಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!