Thursday, March 23, 2023

Latest Posts

BIG NEWS | ಭಾರತೀಯ ದ್ವೀಪ ಪ್ರದೇಶದಲ್ಲಿ ಬಲೂನ್ ರೀತಿ ವಸ್ತು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ತನ್ನ ವಾಯುಗಡಿಯಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಚೀನಾದ ಬೇಹುಗಾರಿಕಾ ಬಲೂನ್‌ನ್ನು ಹೊಡೆದುರುಳಿಸಿದ ಬೆನ್ನಲ್ಲೇ 2022 ರಲ್ಲಿಯೂ ಅನುಮಾನಾಸ್ಪದ ವಸ್ತುವೊಂದು ಹಾರಾಡಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ.

ಒಂದು ವರ್ಷದ ಹಿಂದೆ, ಸಿಂಗಾಪುರಕ್ಕೆ ಸಮೀಪದಲ್ಲಿರುವ ಭಾರತೀಯ ದ್ವೀಪ ಸರಪಳಿಯಲ್ಲಿ ಸ್ಥಳೀಯರು ಆಕಾಶದಲ್ಲಿ ಒಂದು ದೈತ್ಯ ಬಲೂನ್ ರೀತಿ ವಸ್ತುವನ್ನು ಗುರುತಿಸಿದ್ದರು. ಅದು ಏನೆಂದು ಯಾರಿಗೂ ತಿಳಿದಿರಲಿಲ್ಲ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ನೂರಾರು ಜನರು ಈ ಬೆಳಕಿನ ಅಸಮಾನ್ಯ ಹಾರುವ ಬಲೂನ್‌ನಂಥ ವಸ್ತುವಿನ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ಇದರ ಬೆನ್ನಲ್ಲೇ ಭಾರತ ರಕ್ಷಣಾ ವ್ಯವಸ್ಥೆ ಎಚ್ಚೆತ್ತುಕೊಂಡಿತ್ತು. ಈ ದ್ವೀಪಗಳು ಬಂಗಾಳಕೊಲ್ಲಿಯಲ್ಲಿ ಬಾರತ ಕ್ಷಿಪಣಿ ಪರೀಕ್ಷಾ ಶ್ರೇಣಿಗಳಿಗೆ ಸಮೀಪದಲ್ಲಿವೆ ಮತ್ತು ಮಲಕ್ಕಾ ಜಲಸಂಧಿಯ ಬಳಿ ಇವೆ, ಇದು ಚೀನಾ ಮತ್ತು ಇತರ ಉತ್ತರ ಏಷ್ಯಾದ ದೇಶಗಳಿಗೆ ಶಕ್ತಿ ಮತ್ತು ಇತರ ಸರಕುಗಳ ಪೂರೈಕೆಗೆ ಪ್ರಮುಖ ತಡೆಗೋಡೆಯಾಗಿದೆ.

ಈ ವಸ್ತುವು ಇದ್ದಕ್ಕಿದ್ದಂತೆ ಕಾಣಿಸಿದೆ, ಮಾರ್ಗಮಧ್ಯೆ ಭಾರತದ ರೇಡಾರ್ ವ್ಯವಸ್ಥೆಯನ್ನು ಕಣ್ತಪ್ಪಿಸಿ ಬಂದಿದ್ದು ಹೇಗೆ ಎನ್ನುವುದು ಅಚ್ಚರಿಯ ವಿಚಾರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!