ಹೊಸದಿಗಂತ ವರದಿ, ವಿಜಯಪುರ:
ಭಾರತದಲ್ಲಿ ಹಲಾಲ್ ಸರ್ಟಿಫಿಕೇಟ್ ನೀಡುವ ಏಜೆನ್ಸಿಗಳನ್ನು ನಿಷೇಧಿಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಹಲಾಲ್ ಪ್ರಮಾಣಿಕರಿಸುವ ಏಜೆನ್ಸಿ ನಿಷೇಧಿಸುವಂತೆ ಶಾಸಕ ಯತ್ನಾಳ, ಕೇಂದ್ರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪಿಯೂಷ್ ಗೋಯಲ್ ಗೆ ಪತ್ರ ರವಾನಿಸಿದ್ದಾರೆ. ಭಾರತದಲ್ಲಿ ಹಲಾಲ್ ಸರ್ಟಿಫಿಕೇಟ್ ನೀಡುವ ಏಜೆನ್ಸಿಗಳನ್ನ ನಿಷೇಧಿಸುವಂತೆ ತುರ್ತು ಕ್ರಮಕ್ಕೆ ಮನವಿ ಮಾಡಿದ್ದಾರೆ.
ಹಲಾಲ್ ಇಂಡಿಯಾ, ಜಮಿಯತ್ ಉಲೇಮಾ-ಐ-ಹಿಂದ್ ಹಲಾಲ್ ಟ್ರಸ್ಟ್, ಗ್ಲೋಬಲ್ ಇಸ್ಲಾಮಿಕ್ ಶರಿಯಾ, ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಲಾಲ್ ಸರ್ಟಿಫಿಕೇಟ್ ಸರ್ವಿಸ್ ಇಂಡಿಯಾ ಪ್ರೈಟ್ ಲೀಮಿಟೆಡ್, ಜಮಿಯತ್ ಉಲಮಾ-ಇ-ಮಹಾರಾಷ್ಟ್ರ ನಿಷೇಧಕ್ಕೆ ಅವರು ಆಗ್ರಹಿಸಿದ್ದಾರೆ.