ಲ್ಯಾಪ್‌ಟ್ಯಾಪ್ ಆಮದು ಮೇಲೆ ನಿರ್ಬಂಧ?: ಕೇಂದ್ರ ಸರಕಾರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರ ಲ್ಯಾಪ್ ಟಾಪ್ ಗಳ ಆಮದು ಮೇಲೆ ನಿರ್ಬಂಧ ಹೆರುತ್ತೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಭಾರ್ತ್ವಾಲ್ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ದೇಶಿ ತಯಾರಿಕೆಗೆ ಉತ್ತೇಜನ ನೀಡಲು ಲ್ಯಾಪ್ಟಾಪ್ ಆಮದು ಮೇಲೆ ನಿರ್ಬಂಧಗಳನ್ನು ವಿಧಿಸುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ನವೆಂಬರ್ 1ರಿಂದ ಆಮದು ಮಾಡಿಕೊಳ್ಳಲು ಸರ್ಕಾರದಿಂದ ಲೈಸೆನ್ಸ್ ಪಡೆದುಕೊಳ್ಳುವುದು ಅಗತ್ಯ ಎಂದು ತಿಳಿಸಿತ್ತು.

ಆದರೆ ಸರ್ಕಾರದ ಕ್ರಮಕ್ಕೆ ಉದ್ಯಮ ವಲಯ ಮತ್ತು ಅಮೆರಿಕದಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಇದೀಗ ಕೇಂದ್ರ ಸರ್ಕಾರವು ಆಮದುದಾರರ ಮೇಲೆ ನಿಗಾ ಇಡಲಷ್ಟೇ ಬಯಸುತ್ತಿದೆ . ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 3 ರಂದು ಘೋಷಿಸಲಾದ ಆಮದು ಪರವಾನಗಿ ನೀತಿಯು ವಿಶ್ವಾಸಾರ್ಹ ಹಾರ್ಡ್ವೇರ್ ಮತ್ತು ಸಿಸ್ಟಮ್ಗಳನ್ನು ಖಚಿತಪಡಿಸಿಕೊಳ್ಳಲು ಭಾರತವನ್ನು ಪ್ರವೇಶಿಸಲು ಪ್ರಯತ್ನಿಸಿತ್ತು. ಆದರೆ ಉದ್ಯಮದ ಪ್ರತಿಭಟನೆಗಳು ಮತ್ತು ವಾಷಿಂಗ್ಟನ್ ಟೀಕೆಗಳಿಂದ ಮೂರು ತಿಂಗಳು ವಿಳಂಬವಾಯಿತು. ಇದು Dell, HP, Apple, Samsung, ಮತ್ತು Lenovo ನಂತಹ ಸಂಸ್ಥೆಗಳ ಮೇಲೆ ಪ್ರಭಾವ ಬೀರುತ್ತಿದೆ.

ಸರ್ಕಾರವು ಉದ್ಯಮದೊಂದಿಗೆ ಸಮಾಲೋಚನೆ ನಡೆಸುತ್ತಿದೆ ಮತ್ತು ಲ್ಯಾಪ್ಟಾಪ್ ಆಮದು ಕುರಿತು ಹೊಸ ನಿರ್ದೇಶನವನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಜನರಲ್ ಸಂತೋಷ್ ಕುಮಾರ್ ಸಾರಂಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!