ಯುವಕರಲ್ಲಿ ರಾಷ್ಟ್ರಪ್ರೇಮ ಜಾಗೃತವಾಗಲಿ: ಆದರ್ಶ ಗೋಖಲೆ

ಹೊಸದಿಗಂತ ವರದಿ, ಕಲಬುರಗಿ:

ಸನಾತನ ಸಂಸ್ಕೃತಿಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಯುವಕರಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸಬೇಕೆಂದು ಸಾಮಾಜಿಕ ಚಿಂತಕ ಖ್ಯಾತ ವಾಗ್ಮಿ ಆದರ್ಶ ಗೋಖಲೆ ಅಭಿಮತ ವ್ಯಕ್ತಪಡಿಸಿದರು.

ಅವರು ಶುಕ್ರವಾರ ಸಂಜೆ ನಗರದ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಲಬುರಗಿ ಮಹಾನಗರ ಘಟಕದ ವತಿಯಿಂದ ಶೌರ್ಯ ಜಾಗರಣ ರಥಯಾತ್ರೆ ನಿಮಿತ್ತ ಯುವಕರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಭಾರತೀಯ‌ ಸಮಾಜ ಉದಾತ್ತ ಚಿಂತನೆ ಒಳಗೊಂಡಿದೆ. ಜಗತ್ತಿಗೆ ಒಳಿತು ಬಯಸುವ ಹಿಂದು ಧರ್ಮ ಸಹಸ್ರಾರು ವರ್ಷಗಳಿಂದ ಹಿರಿದಾದ ಪರಿಕಲ್ಪನೆಯನ್ನು ಹಿಂದು ಧರ್ಮ ಜಗತ್ತಿಗೆ ಕೊಡುಗೆಯಾಗಿ ನೀಡಿದೆ ಎಂದರು.

ಹಿಂದೂತ್ವದ ಚಿಂತನೆಗಳು ಜಗತ್ತನ್ನೇ ಆವರಿಸಿಕೊಂಡಿವೆ. ಇಂದಿನ ವೈಜ್ಞಾನಿಕ ಸಾಧನೆಯ ಹಿಂದೆ ಭಗವದ್ಗೀತೆ ಕಾರಣ ಎಂದು ವಿದೇಶಿ ವಿಜ್ಞಾನಿ ಅಲ್ಬರ್ ಸ್ಟ್ಯಾನಸೆನ್ ಭಿಪ್ರಾಯ ಪಟ್ಟಿದ್ದಾರೆ.ಇಡೀ ಜಗತ್ತು ಭಾರತೀಯ ವೈಚಾರಿಕತೆ ನೆಲೆಗಟ್ಟಿನಲ್ಲಿ ನಿಲ್ಲಬೇಕು‌ ಎಂದು ಬಯಸುತ್ತಿದೆ. ವಿಶ್ವದಲ್ಲಿ ಎಲ್ಲೆ ಯುದ್ಧವಾದರೇ, ಅದನ್ನು ತಡೆಯಬಲ್ಲ ಶಕ್ತಿ ಭಾರತದ ಪ್ರಧಾನಮಂತ್ರಿಗಿದೆ ಎಂದರು.

ಪ್ರಪಂಚಕ್ಕೆ ಬದುಕಿನ ಪಾಠ ಕಲಿಸಿದ ಶಶಾಸ್ತ್ರ ಮತ್ತು ಶಾಸ್ತ್ರ ಉಪಯೋಗದ ಮರ್ಮ ಹಿಂದು ಧರ್ಮ ಅರಿತುಕೊಂಡಿದೆ. ಸನಾತನ ಸಂಸ್ಕೃತಿ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿದರೆ ಹಿಂದು ಧರ್ಮ ತಲೆ ಕೆಡಸಿಕೊಳ್ಳುವುದಿಲ್ಲ. ಬಾಬರ, ಅಕ್ಬರ್, ಔರಂಗಜೇಬ, ಡಚ್ಚರು,ಬ್ರಿಟಿಷರು ನೂರಾರು ಶತ ಪ್ರಯತ್ನ ಮಾಡಿದರೂ ಸನಾತನ‌ ಸಂಸ್ಕೃತಿ ಅಲುಗಾಡಿಸಲು ಆಗಲಿಲ್ಲ. ಸಾಮಾನ್ಯ ವ್ಯಕ್ತಿಯಿಂದ ಸನಾತನ‌ ಪರಂಪರೆ ಅಳಿಸಲು‌ ಸಾದ್ಯವೇ ಇಲ್ಲ ಎಂದರು ಖಾರವಾಗಿ ನುಡಿದರು.

ಹಿಂದೂ ಆದ್ಯಂತ‌ರಹಿತ‌ ಸಮಾಜ. ಗಜನಿ, ಗೋರಿಗಳು‌ ಆಕ್ರಮಣ ಮಾಡಿದಾಗಲೂ ಹಿಂದೂ‌ ಸಮಾಜ‌ ಜಾಗೃತವಾಗಿತ್ತು. ‌ಹಿಂದೂ ಸಮಾಜ ಆಕ್ರಮಣ ಮೆಟ್ಟಿ ನಿಂತು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.ಸನಾತನ ಧರ್ಮಕ್ಕೆ ಯಾವತ್ತೂ ಸೋಲಿಲ್ಲ. ಹಿಂದು ಮಲಗಿದರೆ ಮಾತ್ರ ಕುಂಭಕರ್ಣ, ಜಾಗೃತವಾದರೆ ಲಂಕೆಯನ್ನು‌ ಸುಟ್ಟ ಹನುಮಂತ ಇದ್ದಂತೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!