October 12, 2026
Monday, October 12, 2026
spot_img

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗಳಿಗೆ ನಿಷೇಧ: ಇದು ಏಕಪಕ್ಷೀಯ ನಿರ್ಧಾರ ಎಂದ ಸಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಂತರ್‌ ಮಂತರ್‌ಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ಸ್ಥಳವನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈ ಬಿಟ್ಟಿರುವ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಕಾಕ್ರೋಚ್‌ ಜನತಾ ಪಾರ್ಟಿಯ ಸಹ ಸಂಯೋಜಕ ಸೌರವ್‌ ದಾಸ್‌ ಹೇಳಿದ್ದಾರೆ.

ಜಂತರ್‌ ಮಂತರ್‌ನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪ್ರತಿಭಟನೆ ನಡೆಸಲು ಮೂರು ಇತರ ಮೈದಾನಗಳನ್ನು ಗುರುತಿಸಲಾಗಿದೆ. ಜಂತರ್‌ ಮಂತರ್‌ನಲ್ಲಿ ಜಾಗ ಕಡಿಮೆ, ಟ್ರಾಫಿಕ್‌ ಜಾಮ್‌, ಸುರಕ್ಷತಾ ದೃಷ್ಟಿಯಿಂದ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದಿರುವುದಾಗಿ ಹೇಳಲಾಗಿದೆ.

ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ, ಏಕಪಕ್ಷೀಯ ನಿರ್ಧಾರ. ನಮ್ಮ ಬಗ್ಗೆ ಭಯವೇ? ನಮ್ಮ ಪ್ರತಿಭಟನೆಯಿಂದ ಹೆದರಿಕೆಯಾಗುತ್ತಿದೆಯೇ? ಜಂತರ್‌ ಮಂತರ್‌ ಯಾರೊಬ್ಬರ ಜಾಗ ಅಲ್ಲ ಅದು ಭಾರತದ ಜನರಿಗೆ ಸೇರಿದ್ದು. ಜನರ ಜೊತೆ ಮಾತನಾಡದೇ ಹೇಗೆ ನಿರ್ಧಾರ ತೆಗೆದುಕೊಂಡರು? ಯಾವುದೇ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಯಿತೇ? ಅಥವಾ ಯಾವುದೇ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲಾಯಿತೇ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದನ್ನು ಬರೆದಿಟ್ಟುಕೊಳ್ಳಿ; ಜನರು ಜಂತರ್ ಮಂತರ್ ಅನ್ನು ಬಳಸುವ ಹಕ್ಕನ್ನು ಹೇಗೆ ರದ್ದುಗೊಳಿಸಲಾಗುತ್ತಿದೆಯೋ, ಹಾಗೆಯೇ ಪ್ರಧಾನಿಯವರು ಶೀಘ್ರದಲ್ಲೇ ಭಾರತದಲ್ಲಿ ಪ್ರಜಾಪ್ರಭುತ್ವವನ್ನೇ ರದ್ದುಗೊಳಿಸಲಿದ್ದಾರೆ. ಈ ಕ್ರಮವು ಆ ದಿಕ್ಕಿನಲ್ಲಿನ ಒಂದು ಹೆಜ್ಜೆಯಾಗಿದೆ. ನಾವು ಈ ಏಕಪಕ್ಷೀಯ ನಿರ್ಧಾರವನ್ನು ಒಪ್ಪುವುದಿಲ್ಲ. ಇದು ಪ್ರತಿಭಟನೆ ಮತ್ತು ಶಾಂತಿಯುತವಾಗಿ ಒಗ್ಗೂಡುವ ಜನರ ಮೂಲಭೂತ ಹಕ್ಕಿನ ಮೇಲಿನ ದಾಳಿಯಾಗಿದೆ. ಈಗ ಇಡೀ ದೇಶವೇ ‘ಜಂತರ್ ಮಂತರ್’ ಆಗಿ ಬದಲಾಗುತ್ತಿದೆ’ ಎಂದು ಅವರು ಹೇಳಿದರು.

Must Read