ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಾಹ್ನದ ಭೋಜನದೊಂದಿಗೆ ಈ ಕೋಸಂಬರಿ ಇದ್ದರೆ ಊಟ ಮತ್ತಷ್ಟು ಸೇರುತ್ತದೆ. ಅಷ್ಟು ರುಚಿಯಾಗಿರುವ ಈ ಕೋಸಂಬರಿ ದೇಹಾರೋಗ್ಯಕ್ಕೂ ಬೆಸ್ಟು!. ಹಾಗಾದ್ರೆ ಯಾವ ಕೋಸಂಬರಿ ಇದು? ಮಾಡೋದು ಹೇಗೆ ನೋಡೋಣವೇ?
ಬೇಕಾಗುವ ಸಾಮಾಗ್ರಿ: ಬಾಳೇದಿಂಡು ಒಂದು, ಗಟ್ಟಿ ಮೊಸರು ಎರಡು ಕಪ್, ಕಾಯಿ ತುರಿ ಅರ್ಧ ಕಪ್, ರುಚಿಗೆ ಬೇಕಾದಷ್ಟು ಉಪ್ಪು, ಉದ್ದಿನ ಬೇಳೆ ಒಂದು ಟೀ ಸ್ಪೂನ್, ಸಾಸಿವೆ, ಇಂಗು, ಕರಿಬೇವು, ಒಣಮೆಣಸು, ತೆಂಗಿನೆಣ್ಣೆ(ಒಗ್ಗರಣೆಗೆ)
ಮಾಡುವ ವಿಧಾನ:
ಬಾಳೇ ದಿಂಡನ್ನು ಚೆನ್ನಾಗಿ ತೊಳೆದು ಸಣ್ಣ ಹೋಳುಗಳನ್ನಾಗಿಸಿ ಎರಡು ಕಪ್ ಆಗುವಷ್ಟು ಸಿದ್ಧಮಾಡಿಕೊಳ್ಳಿ. ಒಂದು ಅಗಲಬಾಯಿಯ ಬೌಲ್ಗೆ ವರ್ಗಾಯಿಸಿಕೊಳ್ಳಿ. ಇದಕ್ಕೆ ಗಟ್ಟಿ ಮೊಸರು, ಕಾಯಿ ತುರಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಮಿಶ್ರಮಾಡಿಕೊಳ್ಳಿ. ಉದ್ದಿನ ಬೇಳೆ, ಇಂಗು, ಕರಿಬೇವು ಒಗ್ಗರಣೆ ನೀಡಿ. ರುಚಿ ರುಚಿಯಾದ ಆರೋಗ್ಯಕ್ಕೂ ಉತ್ತಮವಾದ ಕೋಸಂಬರಿ ರೆಡಿ!