ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಕನ್ನಡ ಚಲನಚಿತ್ರ ಸ್ಪರ್ಧೆಯಲ್ಲಿ ಮಂಜು ಅವಿನಾಶ್ ಶೆಟ್ಟಿ ನಿರ್ದೇಶನದ ನಿರ್ವಾಣ ಮೊದಲ ಅತ್ಯುತ್ತಮ ಚಿತ್ರ ಅನ್ನೋ ಪ್ರಶಸ್ತಿ ಗೆದ್ದುಕೊಂಡಿದೆ.

ಇನ್ನು ನಟಿ ರಮ್ಯಾ ನಿರ್ಮಾಣ ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನೆಟ್‌ಪ್ಯಾಕ್ ತೀರ್ಪುಗಾರರ ಪ್ರಶಸ್ತಿ ಗೆದ್ದುಕೊಂಡಿದೆ. ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಚಿತ್ರ ನಿರ್ದೇಶಕ, ಕಲಾ ನಿರ್ದೇಶಕ ಎಂಎಸ್ ಸತ್ಯೂ ಭಾಜನರಾಗಿದ್ದಾರೆ.

ಜೀವನ ಸಾಧನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ :
ಎಂ ಎಸ್ ಸತ್ಯು

ಕನ್ನಡದ ಮೊದಲ ಅತ್ಯುತ್ತಮ ಚಿತ್ರ:
ನಿರ್ವಾಣಾ
ನಿರ್ದೇಶನ: ಅಮರ್ ಎಲ್ – ನಿರ್ಮಾಣ:ಕೆ. ಮಂಜು ಅವಿನಾಶ್ ಶೆಟ್ಟಿ

ಎರಡನೇ ಅತ್ಯುತ್ತಮ ಚಿತ್ರ
ಕಂದೀಲು
ನಿರ್ದೇಶನ, ನಿರ್ಮಾಣ: ಕೆ ಯಶೋದ ಪ್ರಕಾಶ್

ಮೂರನೇ ಅತ್ಯುತ್ತಮ ಚಿತ್ರ
ಆಲಿಂಡಿಯಾ ರೇಡಿಯೋ
ನಿರ್ದೇಶನ: ರಾಮಸ್ವಾಮಿ- ನಿರ್ಮಾಣ: ದೇವಗಂಗಾ ಪ್ರೇಮ್ಸ್

ತೀರ್ಪಗಾರರ ವಿಶೇಷ ಉಲ್ಲೇಖ
ಕ್ಷೇತ್ರಪತಿ
ನಿರ್ದೇಶನ: ಶ್ರೀಕಾಂತ ಕಟಗಿ -ನಿರ್ಮಾಣ:ಅಶ್ಚ ಕ್ರಿಯೇಶನ್ಸ್

ನೆಟ್‌ಪ್ಯಾಕ್ ತೀರ್ಪುಗಾರರ ಪ್ರಶಸ್ತಿ
ಸ್ವಾತಿ ಮುತ್ತಿನ ಮಳೆಹನಿಯೇ
ನಿರ್ದೇಶನ: ರಾಜ್ ಬಿ ಶೆಟ್ಟಿ – ನಿರ್ಮಾಣ: ರಮ್ಯ (ಆಪ್‌ಲ್ ಬಾಕ್ಸ್ ಸ್ಟುಡಿಯೋಸ್)

ಭಾರತೀಯ ಚಲನಚಿತ್ರ ಸ್ಪರ್ಧೆ ಮೊದಲ ಅತ್ಯುತ್ತಮ ಚಿತ್ರ
ಶ್ಯಾಮ್ಮಿ ಆಯಿ
ನಿರ್ದೇಶನ: ಸುಜಯ್ ದಹಕ – ನಿರ್ಮಾಣ: ಪುಣೆ ಫಿಲಂ ಕಂಪನಿ (ಪ್ರೈ) ಲಿ.

ಭಾರತೀಯ ಚಲನಚಿತ್ರ ಸ್ಪರ್ಧೆ ಎರಡನೇ ಅತ್ಯುತ್ತಮ ಚಿತ್ರ
ಅಯೋಥಿ
ನಿರ್ದೇಶನ: ಮಂಥಿರಾಮೂರ್ತಿ ನಿರ್ಮಾಣ: ಆರ್ ರವೀಂದ್ರನ್

ಭಾರತೀಯ ಚಲನಚಿತ್ರ ಸ್ಪರ್ಧೆ ಮೂರನೇ ಅತ್ಯುತ್ತಮ ಚಿತ್ರ
ಛಾವೆರ್
ನಿರ್ದೇಶನ: ತನು ಪಾಪಚ್ಚನ್ – ನಿರ್ಮಾಣ: ಅರುಣ್ ನಾರಾಯಣ ಪ್ರೊಡಕ್ಷನ್ಸ್

ಫಿಪ್ರೆ ಪ್ರಶಸ್ತಿ
ಶ್ಯಾಮಿ ಆಯಿ
ನಿರ್ದೇಶನ: ಸುಜಯ್ ದಹಕೆ – ನಿರ್ಮಾಣ: ಪುಣೆ ಫಿಲಂ ಕಂಪನಿ (ಪ್ರೈ) ಲಿ.

ಏಶ್ಯನ್ ಚಲನಚಿತ್ರ ಸ್ಪರ್ಧೆ
ಮೊದಲ ಅತ್ಯುತ್ತಮ ಚಿತ್ರ
ಇಲ್ಲಾಹ್ ಎ ಬಾಯ್
ಜೋರ್ಡನ್
ನಿರ್ದೇಶನ: ಅಮ್ಮದ್ ಅಲ್ ರಶೀದ್- ನಿರ್ಮಾಣ: ಇಮೇಜಿನೇರಿಯಂ ಫಿಲಂಸ್, ಜಾರ್ಜಸ್ ಫಿಲಂಸ್

ಎರಡನೇ ಅತ್ಯುತ್ತಮ ಚಿತ್ರ
ಸ್ಥಳ್
ಇಂಡಿಯನ್
ನಿರ್ದೇಶನ: ಜಯಂತ್ ದಿಗಂಬರ್ ಸೋಮಾಲ್ಕರ್, ನಿರ್ಮಾಣ: ಧುನ್

ಮೂರನೇ ಅತ್ಯುತ್ತಮ ಚಿತ್ರ
ಸಂಡೇ
ಉಜೈಕಿಸ್ತಾ
ನಿರ್ದೇಶನ: ಶೋಕಿರ್ ಕೊಲಿಕೊವ್ – ನಿರ್ಮಾಣ: ಫಿರ್ದವಾಸ್ ಅಬ್ಬುಕೊಲಿಕೊವ್

ತೀರ್ಪಗಾರರ ವಿಶೇಷ ಉಲ್ಲೇಖ
ಮಿಥ್ಯ
ನಿರ್ದೇಶನ: ಸುಮಂತ್ ಭಟ್ – ನಿರ್ಮಾಣ: ಪರಂವಃ ಪಿಕ್ಚರ್ಸ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!