ರಾತ್ರಿ 10 ಗಂಟೆ ಮೇಲೆ‌ ಈ ವಸ್ತುಗಳನ್ನು ಹೆಚ್ಚಾಗಿ DUNZO ಮೂಲಕ ಆರ್ಡರ್ ಮಾಡಿದ್ದಾರೆ ಬೆಂಗಳೂರಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೂಲದ ಪ್ರಸಿದ್ಧ ಆನ್ ಲೈನ್ ಗ್ರೋಸರಿ ಡೆಲಿವರಿ ಕಂಪನಿಯಾದ DUNZO ತನ್ನ‌ ವಾರ್ಷಿಕ ವರದಿಯನ್ನು‌ ಬಿಡುಗಡೆ ಗೊಳಿಸಿದ್ದು, ಭಾರತೀಯರು ಆನ್ ಲೈನ್‌‌ನಲ್ಲಿ ದಿನಸಿ ವಸ್ತುಗಳಿಂದ ಹಿಡಿದು ಯಾವೆಲ್ಲ ವಸ್ತುಗಳನ್ನು‌ ಆರ್ಡರ್ ಮಾಡಿದ್ದಾರೆ ಎಂಬಂಶವನ್ನು ತೆರೆದಿಟ್ಟಿದೆ.

ಆರ್ಡರ್ ಪಟ್ಟಿಯಲ್ಲಿ 10 ಗಂಟೆಯ ಮೇಲೆ‌ ಬೆಂಗಳೂರಿಗರು DUNZO ವಿನಲ್ಲಿ ಆರ್ಡರ್ ಮಾಡಿದ ವಸ್ತುಗಳ ಪೈಕಿ ಚಿಪ್ಸ್, ನಾಚೋಸ್ ಹಾಗೆಯೇ ಸಿಗರೇಟ್ ಗಳು‌ ಅಗ್ರಸ್ಠಾನ‌‌ ಪಡೆದಿವೆ. ಅಲ್ಲದೇ ಒಟ್ಟಾರೆಯಾಗಿ ಬೆಂಗಳೂರಿನಲ್ಲೇ ಆರ್ಡರ್ ಮಾಡಿದ ವಸ್ತುಗಳ ಪೈಕಿ ಅತಿ ಹೆಚ್ಚಾಗಿ ತಾಜಾ ತಿನಿಸುಗಳು, ಉಪಾಹಾರ ಮತ್ತು ಸ್ನ್ಯಾಕ್ಸ್ ಗಳು, ಅಲ್ಲದೇ ವೈಯುಕ್ತಿಕ ಮನೆ‌‌‌ ಬಳಕೆ ವಸ್ತುಗಳನ್ನು ಅತಿ‌ ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ.

ಇದಲ್ಲದೇ ಡೆಲಿವರಿ ಪಾರ್ಟ್ನರ್ ಗೆ ‘ಟಿಪ್ಸ್’ ನೀಡುವುದರಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದಿದ್ದರೆ‌ ಒಟ್ಟಾರೆಯಾಗಿ‌ ಭಾರತದಲ್ಲಿ 3 ಕೋಟಿ ರೂಪಾಯಿಗಳಷ್ಟು ‘ಟಿಪ್ಸ್’ ನೀಡಲಾಗಿದೆ ಎಂದು ವರದಿ ಹೇಳಿದೆ.

ಇದಲ್ಲದೇ ಕೋವಿಡ್ ನಂತರವೂ ದಿನಸಿ‌ ವಸ್ತುಗಳನ್ನು ಆನ್ ಲೈನ್ ಮೂಲಕ ತರಿಸುವುದನ್ನು ಬಹುತೇಕರು ಮೆಚ್ಚಿಕೊಂಡಿದ್ದು, ಭಾರತಾದ್ಯಂತ ಬಹುತೇಕ‌ ನಗರಗಳಲ್ಲಿ ಜನರು ಹಾಲನ್ನು ಹೆಚ್ಚಾಗಿ ತರಿಸಿದ್ದಾರೆ. ತರಕಾರಿಗಳಲ್ಲಿ ಜನರು ಟೊಮ್ಯಾಟೋ, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಹೆಚ್ಚಾಗಿ ತರಿಸಿದ್ದಾರೆ. ಹಣ್ಣುಗಳ ಪೈಕಿ ಬಾಳೆ‌ಹಣ್ಣು ನೆಚ್ಚಿನದಾಗಿದ್ದು ಅದನ್ನು‌ ಬಿಟ್ಟರೆ ತಾಜಾ ತೆಂಗಿನಕಾಯಿಗಳನ್ನು‌ ಜನರು ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ.‌ ಇದಲ್ಲದೇ ಗೋಧಿ ಹಿಟ್ಟು ಆರ್ಡರ್ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನ‌ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!