ಹೊಸದಿಗಂತ ಡಿಜಿಟಲ್ ಡೆಸ್ಕ್;
ಬಾಂಗ್ಲಾದೇಶದ ಗಾಜಿ ಟಿವಿಯಲ್ಲಿ (Gazi TV) ನ್ಯೂಸ್ ರೂಂ ಸಂಪಾದಕರಾಗಿದ್ದ ಸಾರಾ ರಹನುಮಾ ಅವರ ಮೃತದೇಹ ಢಾಕಾದ ಸರೋವರದಲ್ಲಿ ಪತ್ತೆಯಾಗಿದೆ.
ಬುಧವಾರ ದೇಶದ ರಾಜಧಾನಿಯ ಹತಿರ್‌ಜೀಲ್ ಸರೋವರದಲ್ಲಿ ಆಕೆಯ ಶವ ತೇಲುತ್ತಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆ (ಡಿಎಂಸಿಎಚ್) ಪೊಲೀಸ್ ಹೊರಠಾಣೆ ಉಸ್ತುವಾರಿ ಇನ್ಸ್‌ಪೆಕ್ಟರ್ ಬಚ್ಚು ಮಿಯಾ ಆಕೆಯ ಮೃತದೇಹವನ್ನು ಹೊರತೆಗೆದಿರುವುದಾಗಿ ಖಚಿತಪಡಿಸಿದ್ದಾರೆ.
ಮೃತದೇಹವನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಡಿಎಂಸಿಎಚ್) ಕೊಂಡೊಯ್ದರು, ಅಲ್ಲಿ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಸಾವಿಗೂ ಮುನ್ನ ಸಾರಾ ಮಂಗಳವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು.“ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸಲಿ. ಶೀಘ್ರದಲ್ಲೇ ನಿಮ್ಮ ಎಲ್ಲಾ ಕನಸುಗಳನ್ನು ನೀವು ಈಡೇರಿಸುತ್ತೀರಿ ಎಂದು ಭಾವಿಸುತ್ತೇವೆ. ನಾವು ಒಟ್ಟಿಗೆ ಸಾಕಷ್ಟು ಯೋಜನೆಯನ್ನು ಹೊಂದಿದ್ದೇವೆ ಎಂದು ನನಗೆ ತಿಳಿದಿದೆ. ಕ್ಷಮಿಸಿ, ನಮ್ಮ ಯೋಜನೆಗಳನ್ನು ಪೂರೈಸಲು ನನಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಅವರು ಬರೆದಿದ್ದಾರೆ.
ಹಿಂದಿನ ಪೋಸ್ಟ್‌ನಲ್ಲಿ ಅವರು ಸಾವಿಗೆ ಸಮಾನವಾದ ಜೀವನವನ್ನು ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂದು ಬರೆದಿದ್ದರು.
ಆಕೆ ಕೆಲಸ ಮಾಡುತ್ತಿದ್ದ ಚಾನೆಲ್ ಇತ್ತೀಚೆಗೆ ಬಂಧಿಸಲ್ಪಟ್ಟ ಗೋಲಂ ದಸ್ತಗೀರ್ ಗಾಜಿ ಒಡೆತನದ ಜಾತ್ಯತೀತ ಮಾಧ್ಯಮ ಸಂಸ್ಥೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
‘ಗಾಜಿ ಟಿವಿ ನ್ಯೂಸ್‌ರೂಮ್ ಸಂಪಾದಕರಾದ ರಹಮುನಾ ಸಾರಾ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಶವವನ್ನು ಢಾಕಾ ನಗರದ ಹತಿರ್‌ಜೀಲ್ ಸರೋವರದಿಂದ ಹೊರತೆಗೆಯಲಾಗಿದೆ. ಇದು ಬಾಂಗ್ಲಾದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಮತ್ತೊಂದು ಕ್ರೂರ ದಾಳಿಯಾಗಿದೆ. ಗಾಜಿ ಟಿವಿ ಇತ್ತೀಚೆಗೆ ಬಂಧಿಸಲ್ಪಟ್ಟ ಗೋಲಂ ದಸ್ತಗೀರ್ ಗಾಜಿ ಒಡೆತನದ ಜಾತ್ಯತೀತ ಸುದ್ದಿ ವಾಹಿನಿಯಾಗಿದೆ’ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಕೆಯ ಪತಿ ಸೈಯದ್ ಶುವ್ರೋ ಪ್ರಕಾರ, ಅವಳು ಕೆಲಸಕ್ಕೆ ಹೋಗಿದ್ದಳು. ಆದರೆ ಮನೆಗೆ ಹಿಂದಿರುಗಲಿಲ್ಲ. ಬೆಳಗಿನ ಜಾವ 3 ಗಂಟೆಗೆ ಆಕೆ ಕೆರೆಗೆ ಹಾರಿದ್ದಾಳೆ ಎಂಬ ಮಾಹಿತಿ ಲಭಿಸಿದೆ.