ಹೊಸದಿಗಂತ ವರದಿ, ಗದಗ:
ಓಣಿಯಲ್ಲಿ ಕುಡಿದು ಗಲಾಟೆ ಮಾಡಬೇಡ ಎಂದು ಬುದ್ದಿ ಹೇಳಿದ ವೃದ್ದೆ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಗರದ ದಾಸರ ಓಣಿಯಲ್ಲಿಜರುಗಿದೆ.
ನಗರದ ದಾಸರಓಣಿಯ ಸಿದ್ದಲಿಂಗಪ್ಪ ಅಗಡಿ ಎಂಬುವನು ಮಂಗಳವಾರ ರಾತ್ರಿ ಮದ್ಯ ಕುಡಿದು ಬಂದು ಅಸಭ್ಯ ವರ್ತನೆ ತೋರಿ ಗಲಾಟೆ ಮಾಡಿದ್ದರಿಂದ ಅಲ್ಲಿನ ನಿವಾಸಿಗಳು ಪೊಲೀಸರನ್ನು ಕರೆಯಿಸಿ ಬುದ್ದಿ ಕಲಿಸಿದ್ದರು. ಮಗನ ನಡುವಳಿಕೆಯಿಂದ ಮನನೊಂದ ತಾಯಿ ಶಾರದಮ್ಮ ಅಗಡಿ (85) ಜನರ ಮುಂದೆ ಮಗನಿಗೆ ಬುದ್ದಿ ಹೇಳಿದ್ದರು ಎನ್ನಲಾಗಿದೆ. ಇದರಿಂದ ಕುದ್ದುಹೋದ ಮಗ ಸಿದ್ದಲಿಂಗಪ್ಪ ಅಗಡಿ ಅಂದು ರಾತ್ರಿ ಮಲಗಿದ್ದ ತಾಯಿಯನ್ನು ಅವಳ ಕೊರಳಲಿದ್ದ ಶಿವದಾರದಿಂದ ಉಸಿರುಗಟ್ಟಿಸಿ ನಂತರ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪಿ ಸಿದ್ದಲಿಂಗಪ್ಪ ಅವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.