ಟೆಸ್ಟ್, ಟಿ-20 ಕ್ರಿಕೆಟ್​ಗೆ ಗುಡ್ ಬೈ ಹೇಳಿದ ಬಾಂಗ್ಲಾ ಆಲ್‌ರೌಂಡರ್‌ ಶಕಿಬ್ ಅಲ್‌ ಹಸನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ ಆಲ್‌ರೌಂಡರ್‌ ಶಕಿಬ್ ಅಲ್‌ ಹಸನ್‌ ನಿವೃತ್ತಿ ಘೋಷಿಸಿದ್ದಾರೆ.

ಕಾನ್ಪುರ ಗ್ರೀನ್‌ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್‌ ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಶುರುವಾಗಬೇಕಿದ್ದು, ಇದಕ್ಕೂ ಮೊದಲೇ ನಿವೃತ್ತಿ ಘೋಷಿಸಿದ್ದಾರೆ.

ಗುರುವಾರ (ಸೆ.26) ಮಾತನಾಡಿರುವ ಶಕಿಬ್ ಅಲ್‌ ಹಸನ್‌, ಟೆಸ್ಟ್​​ ಮತ್ತು ಟಿ20 ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಆದ್ರೆ ಅಕ್ಟೋಬರ್ ತಿಂಗಳಲ್ಲಿ ತವರಿನಲ್ಲಿ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ ಅಂತಿಮ ಪಂದ್ಯ ಆಡುವ ಬಯಕೆ ಹೊರಹಾಕಿದ್ದಾರೆ. ಈಗಾಗಲೇ 2024ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ನಾನು ಬಾಂಗ್ಲಾದೇಶ ಪರವಾಗಿ ನನ್ನ ಕೊನೆಯ ಟಿ20 ಪಂದ್ಯವನ್ನು ಆಡಿದ್ದೇನೆ. ಮುಂದಿನ 3 ತಿಂಗಳ ಅವಧಿಯಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಏಕದಿನ ಮಾದರಿಯ ಕ್ರಿಕೆಟ್​ನಲ್ಲಿ ಶಕೀಬ್ ಮುಂದುವರೆಯಲಿದ್ದಾರೆ. 2025ರ ಚಾಂಪಿಯನ್ ಟ್ರೋಫಿ ಬಳಿಕ ಈ ಮಾದರಿಗೂ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಪರ 70 ಟೆಸ್ಟ್‌ಗಳನ್ನು ಆಡಿದ್ದಾರೆ. 128 ಬ್ಯಾಟ್​ ಬೀಸಿರುವ ಅವರು ಒಟ್ಟು 4600 ರನ್ ಕಲೆ ಹಾಕಿದ್ದಾರೆ. ಈ ರನ್​ಗಳ ಪೈಕಿ 5 ಶತಕ, 4 ದ್ವಿಶತಕ, 31 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 119 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಶಕಿಬ್ 242 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!