ಏಷ್ಯಾಕಪ್ ನಲ್ಲಿ ಬಾಂಗ್ಲಾ ಕಮ್​ಬ್ಯಾಕ್: ಅಫ್ಘಾನಿಸ್ಥಾನಕ್ಕೆ 335 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯಾಕಪ್​ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಅಫ್ಘಾನಿಸ್ಥಾನ ವಿರುದ್ಧ ಉತ್ತಮ ಕಮ್​ಬ್ಯಾಕ್​ ಮಾಡಿದೆ.

ಮೆಹಿದಿ ಹಸನ್ ಮಿರಾಜ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರು ಭರ್ಜರಿ ಶತಕ ಗಳಿಸಿದ್ದು, ಅಫ್ಘಾನಿಸ್ತಾನಕ್ಕೆ 335 ರನ್​ನ ಬೃಹತ್​ ಗುರಿಯನ್ನು ನೀಡಿದೆ.

ಮೊದಲ ವಿಕೆಟ್​ಗೆ ಮೆಹಿದಿ ಹಸನ್ ಮಿರಾಜ್ ಮತ್ತು ಮೊಹಮ್ಮದ್ ನಯಿಮ್ 60 ರನ್​ ಜೊತೆಯಾಟ ಮಾಡಿದರು. 28 ರನ್ ಗಳಿಸಿದ್ದ ನಯಿಮ್​ ಕ್ಲೀನ್ ಬೌಲ್ಡ್​ಗೆ ಬಲಿಯಾದರು. ಅವರ ಬೆನ್ನಲ್ಲೇ ತೌಹಿದ್ ಹೃದಯೋಯ್ ಶೂನ್ಯಕ್ಕೆ ಔಟ್​ ಆದರು. ನಯಿಮ್ ಜೊತೆ ಸೇರಿಕೊಂಡ ನಜ್ಮುಲ್ ಹೊಸೈನ್ ಶಾಂಟೊ ಭರ್ಜರಿ ಇನ್ನಿಂಗ್ಸ್​ ಕಟ್ಟಿದರು. ಮೂರನೇ ವಿಕೆಟ್​ಗೆ ಈ ಜೋಡಿ 194 ರನ್​ನ ಜೊತೆಯಾಟವನ್ನು ಮಾಡಿತು.

ಹಸನ್ ಮಿರಾಜ್ 7 ಬೌಂಡರಿ ಮತ್ತು 3ಸಿಕ್ಸ್​ ಬಾರಿಸಿ 119 ಬಾಲ್​ನಲ್ಲಿ 112 ರನ್​ ಗಳಿಸಿದರು. 112 ರನ್​ ಗಳಿಸಿ ಆಡುತ್ತಿದ್ದ ಹಸನ್ ಮಿರಾಜ್ ಎಡಗೈ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಹೊರನಡೆದರು. ನಜ್ಮುಲ್ ಹೊಸೈನ್ ಶತಕ ದಾಖಲಿಸಿದರು. 105 ಬಾಲ್​ನಲ್ಲಿ 104 ರನ್​ ಗಳಸಿದ ಅವರು ರನ್​ ಔಟ್​ಗೆ ಬಲಿಯಾದರು.

ನಂತರ ವಿಕೆಟ್​ ಕೀಪರ್​ ಮುಶ್ಫಿಕರ್ ರಹೀಮ್ (25) ಮತ್ತು ನಾಯಕ ಶಕೀಬ್ ಅಲ್ ಹಸನ್ ಕೊಂಚ ರನ್​ ಸೇರಿಸಿದರು.
ಒಟ್ಟಿನಲ್ಲಿ 50 ಓವರ್​ ಮುಕ್ತಾಯಕ್ಕೆ ಬಾಂಗ್ಲಾದೇಶ 5 ವಿಕೆಟ್​ ಕಳೆದುಕೊಂಡು 334 ರನ್​ ಗಳಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!