ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮದ ವಿರುದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಭಾರಿ ವಿವಾದ ಸೃಷ್ಟಿಸಿದ್ದಾರೆ. ಹಿಂದುಗಳು ತನಾ ತನಿಸ್ ಅಲ್ಲ. ಆದರೆ ತನಾತನಿಸ್ ಮಾನವ ವಿರೋಧಿಗಳು ಎಂದು ಟ್ವೀಟ್ ಮಾಡಿದ್ದಾರೆ.
ಚಂದ್ರಯಾನ ಯಶಸ್ಸು ಸಹಿಸದ ಪ್ರಕಾಶ್ ರಾಜ್ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿ ಇಸ್ರೋ ಹಾಗೂ ಭಾರತವನ್ನು ಗೇಲಿ ಮಾಡಿದ್ದರು. ಇದೀಗ ಸನಾತನ ಧರ್ಮದ ವಿರುದ್ಧ ಟ್ವೀಟ್ ಮಾಡಿ ಹಿಂದುಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್‌ನಲ್ಲಿ ಹೆಚ್ಚಿನ ಪದಗಳಿಲ್ಲ. ಆದರೆ ಬಳಸಿರುವ ಪದಗಳು ಕಠಿಣವಾಗಿದೆ. ಇಷ್ಟೇ ಅಲ್ಲ ಇದರ ಜೊತೆಗೆ ಪೆರಿಯಾರ್ ಹಾಗೂ ಡಾ.ಬಿಆರ್ ಅಂಬೇಡ್ಕರ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಹಿಂದುತ್ವ ಹಾಗೂ ಸನಾತನ ಧರ್ಮ ವಿರುದ್ಧ ಕೆಂಡ ಕಾರಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್ ಮೂಲಕ ಇವಿ ರಾಮಸ್ವಾಮಿ ಅಂದರೆ ಪೆರಿಯಾರ್ ಹಾಗೂ ಅಂಬೇಡ್ಕರ್ ಫೋಟೋ ಹಂಚಿಕೊಂಡಿದ್ದು, ಇದಕ್ಕೆ ಹಿಂದುಗಳು ತನಾತನಿಗಳಲ್ಲ. ಆದರೆ ತನಾತನೀಸ್ ಮಾನವ ವಿರೋಧಿಗಳು. ನೀವು ಒಪ್ಪಿದರೆ ರಿಟ್ವೀಟ್ ಮಾಡಿ. ಶುಭ ಭಾನುವಾರ. ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ಈ ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
Hindu s ar not #TanaThanis .. Tanathanis are #AntiHumans .. RT if you agree. Happy Sunday to all #justasking pic.twitter.com/3GZYXdVygg
— Prakash Raj (@prakashraaj) September 3, 2023