ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಬಾಂಗ್ಲಾದೇಶ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲಿನ ಸಂಕಷ್ಟದಲ್ಲಿ ಸಿಲುಕಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿರುವ 515 ರನ್ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಬಾಂಗ್ಲಾದೇಶ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಝಾಕಿರ್ ಹಸನ್ (33 ರನ್) ಮತ್ತು ಶಾದ್ಮನ್ ಇಸ್ಲಾಂ (35 ರನ್) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 62ರನ್ ಕಲೆ ಹಾಕಿತು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅಶ್ವಿನ್ ಶಾದ್ಮನ್ ಇಸ್ಲಾಂರ ವಿಕೆಟ್ ಪಡೆದರು.
ಬಳಿಕ ಜಸ್ ಪ್ರೀತ್ ಬುಮ್ರಾ ಕೂಡ ಝಾಕಿರ್ ಹಸನ್ ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ಮತ್ತೊಂದು ಆಘಾತ ನೀಡಿದರು. ಬಳಿಕ ಕ್ರೀಸ್ ಗೆ ಬಂದ ನಾಯಕ ಶಾಂತೋ ಅಜೇಯ ಅರ್ಧಶತಕ ಗಳಿಸಿ ಬಾಂಗ್ಲಾ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.ಆದರೆ ಮೋಮಿನುಲ್ ಹಕ್ ಮತ್ತು ಮುಷ್ಪಿಕರ್ ರಹೀಂ ತಲಾ 13ರನ್ ಗಳಿಸಿ ಅಶ್ವಿನ್ ಬೌಲಿಂಗ್ ನಲ್ಲಿ ಔಟಾದರು.
51ರನ್ ಗಳಿಸಿರುವ ನಾಯಕ ಶಾಂತೋ, 5 ರನ್ ಗಳಿಸಿರುವ ಶಕೀಬ್ ಅಲ್ ಹಸನ್ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.