ಬಾಂಗ್ಲಾ ಗೆಲುವಿಗೆ ಬೇಕು 241 ರನ್: ಭಾರತಕ್ಕೆ ಬೇಕಿದೆ 4 ವಿಕೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾ ಉತ್ತಮ ಬ್ಯಾಟಿಂಗ್ ನಡೆಸಿದೆ.
ಸದ್ಯ ದಿನದ ಆಟ ಮುಗಿದಿದ್ದು, ಶಕೀಬ್ ಅಲ್ ಹಸನ್ ಹಾಗೂ ಮಹೆದಿ ಹಸನ್ ಬಾಂಗ್ಲಾದೇಶ ತಂಡಕ್ಕೆ ಆಸರೆಯಾಗಿದ್ದಾರೆ.

4ನೇ ದಿನದಾಟದಲ್ಲಿ ಬಾಂಗ್ಲಾದೇಶ ದಿಟ್ಟ ಹೋರಾಟ ನಡೆಸಿತು. ಜಾಕೀರ್ ಹಸನ್ ಶತಕ ಹಾಗೂ ನಜ್ಮುಲ್ ಹೊಸೈನ್ ಹಾಫ್ ಸೆಂಚುರಿ ಬಾಂಗ್ಲಾದೇಶ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು.

ಬಳಿಕ ಯಾಸಿರ್ ಆಲಿ ಹಾಗೂ ಲಿಟ್ಟನ್ ದಾಸ್ ವಿಕೆಟ್ ಬಹುಬೇಗ ಪತನಗೊಂಡಿತು. ಯಾಸಿರ್ ಆಲಿ ಕೇವಲ 5 ರನ್ ಸಿಡಿಸಿದರೆ, ಲಿಟ್ಟನ್ ದಾಸ್ 19 ರನ್ ಸಿಡಿಸಿ ಔಟಾದರು.

ಇತ್ತ ಜಾಕಿರ್ ಹಸನ್ ದಿಟ್ಟ ಹೋರಾಟದ ಮೂಲಕ ಸೆಂಚುರಿ ಸಿಡಿಸಿದರು. ಶತಕ ಸಿಡಿಸಿದ ಬೆನ್ನಲ್ಲೇ ಜಾಕಿರ್ ಹಸನ್ ವಿಕೆಟ್ ಪತನಗೊಂಡಿತು. ಇತ್ತ ಮುಶ್ಫಿಕರ್ ರಹೀಮ್ 23 ರನ್ ಸಿಡಿಸಿ ಔಟಾದರು. ನೂರುಲ್ ಹಸನ್ 3 ರನ್ ಸಿಡಿಸಿ ಔಟಾದರು. ವಿಕೆಟ್ ಪತನದಿಂದ ಆತಂಕಗೊಂಡ ಬಾಂಗ್ಲಾದೇಶ ತಂಡಕ್ಕೆ ನಾಯಕ ಶಕೀಬ್ ಅಲ್ ಹಸನ್ ಆಸರೆಯಾದರು. ಮೆಹದಿ ಹಸನ್ ಜೊತೆ ಸೇರಿಕೊಂಡು ತಂಡಕ್ಕೆ ಚೇತರಿಸಿಕೆ ನೀಡಿದರು.

ಶಕೀಬ್ ಅಲ್ ಹಸನ್ ಅಜೇಯ 40 ರನ್ ಸಿಡಿಸಿದರೆ, ಮೆಹದಿ ಹಸನ್ 9 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಬಾಂಗ್ಲಾದೇಶ 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸಿದೆ. ಇದೀಗ ಬಾಂಗ್ಲಾ ಗೆಲುವಿಗೆ 241 ರನ್ ಅವಶ್ಯಕತೆ ಇದೆ. ಆದರೆ ಉಳಿದಿರುವ 4 ವಿಕೆಟ್ ಮಾತ್ರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!