Wednesday, October 5, 2022

Latest Posts

ಕಲಾವಿದರೊಂದಿಗೆ ಬಾಂಗ್ಲಾ ಪ್ರಧಾನಿ ಮಸ್ತ್‌ ಮಸ್ತ್‌ ಸ್ಟೆಪ್ಸ್‌ ವಿಡಿಯೋ ನೋಡಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳ ಕುರಿತ ಚರ್ಚೆಯಲ್ಲಿ ನಿರತರಾಗಿದ್ದಾರೆ. ಒಂದೇ ದಿನದಲ್ಲಿ ನಾಲ್ಕೈದು ಭಾರತೀಯ ಪ್ರಮುಖ ನಾಯಕರನ್ನು ಭೇಟಿ ಮಾಡಿ, ಕಡಿಮೆ ಸಮಯದಲ್ಲಿ ಗರಿಷ್ಠ ಲಾಭ ಪಡೆಯಲು ಮುಂದಾಗುತ್ತಿದ್ದಾರೆ. ಏತನ್ಮಧ್ಯೆ, ಅಂತಹ ಬಿಡುವಿಲ್ಲದ ಸಮಯದಲ್ಲೂ ಸಹ ಕಲಾವಿದರೊಂದಿಗೆ ಅವರು ನೃತ್ಯ ಮಾಡುತ್ತಿರುವುದು ಕುತೂಹಲಕಾರಿಯಾಗಿದೆ.

ರಾಜಸ್ಥಾನದ ಭೇಟಿಯ ಸಂದರ್ಭದಲ್ಲಿ ಗುರುವಾರ ಜೈಪುರಕ್ಕೆ ಆಗಮಿಸಿದ ಅವರಿಗೆ ರಾಜಸ್ಥಾನಿ ಕಲಾವಿದರು ವಿಶೇಷ ಸ್ವಾಗತ ಕೋರಿದರು. ಜನರು ಹಾಡುತ್ತಾ ಕುಣಿಯುವುದನ್ನು ನೋಡಿ ಹಸೀನಾ ಮುಂದೆ ಬಂದು ಅವರ ಜೊತೆ ಸೇರಿ ಒಂದೆರೆಡು ಹೆಜ್ಜೆ ಹಾಕಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!