ಬಾಂಗ್ಲಾದೇಶ: ವಿರೋಧ ಪಕ್ಷದ ಇಬ್ಬರು ನಾಯಕರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ರಾಜಧಾನಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶಕ್ಕೆ ಒಂದು ದಿನ ಮುಂಚಿತವಾಗಿ, ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿಯ ಇಬ್ಬರು ಉನ್ನತ ನಾಯಕರನ್ನು ಬಾಂಗ್ಲಾದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಸೆಕ್ರೆಟರಿ ಜನರಲ್ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಮತ್ತು ಸ್ಥಾಯಿ ಸಮಿತಿಯ ಸದಸ್ಯ ಮಿರ್ಜಾ ಅಬ್ಬಾಸ್ ಅವರನ್ನು ಅವರ ಮನೆಗಳಿಂದ ಬಂಧಿಸಲಾಗಿದೆ.
ಅವಾಮಿ ಲೀಗ್ ಪ್ರಧಾನಿ ಶೇಕ್‌ ಹಸೀನಾ ತಕ್ಷನವೇ ಅಧಿಕಶರದಿಂದ ಕೆಳಗಿಳಿದು ಚುಣಾವಣೆಗೆ ಮುಂದಾಗಬೇಕೆಂದು ಪ್ರತಿಪಕ್ಷ ಬಿಎನ್‌ಪಿ ಹೇಳುತ್ತಿದೆ. ಬಾಂಗ್ಲಾದೇಶ ತನ್ನ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು 2024 ರಲ್ಲಿ ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!