ಬಾಂಗ್ಲಾದೇಶದ ಮತೀಯ ಗಲಭೆ ಭಾರತಕ್ಕೆ ಎಚ್ಚರಿಕೆಯ ಗಂಟೆ: ವಿನಾಯಕ ಭಟ್ ಮುರೂರು

ಹೊಸದಿಗಂತ ವರದಿ, ಮೈಸೂರು:

ಬಾಂಗ್ಲಾದೇಶದಲ್ಲಿ ನಡೆದಿರುವ ಮತೀಯ ಗಲಭೆಯಿಂದಾಗಿ ಅಲ್ಲಿ ಅರಾಜಕತೆಯುಂಟಾಗಿದ್ದೆ. ಅಲ್ಲಿನ ಹಿಂದುಗಳು ಆತಂಕಕಾರಿ ಪರಿಸ್ಥಿತಿಯಲ್ಲಿದ್ದಾರೆ. ಈ ಮತೀಯ ಗಲಭೆಯ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ ಎಂದು ಹೊಸದಿಗಂತ ದಿನಪತ್ರಿಕೆಯ ಸಮೂಹ ಸಂಪಾದಕ ವಿನಾಯಕ ಭಟ್ ಮುರೂರು ಹೇಳಿದರು.

ಶನಿವಾರ ಸಂಜೆ ಜನಜಾಗರಣ ಟ್ರಸ್ಟ್, ಮಂಥನ, ಮೈಸೂರು ವತಿಯಿಂದ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ನಲ್ಲಿರುವ ಎಸ್.ಪಿ.ಭಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಬಾಂಗ್ಲಾದೇಶ-ವರ್ತಮಾನದ ತಲ್ಲಣಗಳು ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶ ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ೧.೪೦ ಕೋಟಿ ಹಿಂದುಗಳು ವಾಸಿಸುತ್ತಿದ್ದಾರೆ. ಅಲ್ಲಿನ ಹಿಂದುಗಳಿಗೂ ಉತ್ತರ ಭಾರತದ ಬಂಗಾಲಿಗಳಿಗೂ ಅವಿನಾಭಾವ ಸಂಬoಧವಿದೆ. ಕೇವಲ ಒಂದು ಭಾಷೆಯ ಸಂಸ್ಕೃತಿಗಾಗಿ ನಡೆದ ಹೋರಾಟದಿಂದ ಸ್ವಾತಂತ್ರ್ಯಳಿಸಿದ ಯಾವುದಾದರೂ ರಾಷ್ಟ್ರ ವಿಶ್ವದಲ್ಲಿ ಇದೆ ಎಂದರೆ ಅದು ಬಾಂಗ್ಲಾದೇಶ. ಈ ದೇಶದ ಅಭಿವೃದ್ಧಿಯಲ್ಲಿ, ಬೆಳವಣಿಗೆಯಲ್ಲಿ ಭಾರತದ ಬಹಳಷ್ಟು ಕೊಡುಗೆಗಳು, ಸಹಾಯಗಳು ಇವೆ. ಇಂತಹ ದೇಶವನ್ನು ಇಸ್ಲಾಮೀಕರಣ ಮಾಡುವ, ಭಾರತದ ವಿರುದ್ಧ ಗೂಢಾಚಾರಿಕೆ ನಡೆಸುವ ಸ್ಥಳವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನ ಹಾಗೂ ಚೀನಾ ದೇಶಗಳು ನಿರಂತರವಾದ ಪ್ರಯತ್ನಗಳು ನಡೆಸುತ್ತಿವೆ. ಆದರೆ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಅಲ್ಲಿ ಭಯೋತ್ಪಾಧನಾ ಚಟುವಟಿಕೆಗಳು, ಭಾರತದ ವಿರೋಧಿ ಕೃತ್ಯಗಳನ್ನು ನಡೆಸಲು ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಷಡ್ಯಂತ್ರ ನಡೆಸಿ, ಅಲ್ಲಿ ಮೀಸಲಾತಿ ನೆಪದಲ್ಲಿ ಮತೀಯ ಗಲಭೆಯನ್ನು ಬಹು ದೊಡ್ಡ ಪ್ರಮಾಣದಲ್ಲಿ ನಡೆಸಿ, ಅರಾಜಕತೆಯನ್ನುಂಟು ಮಾಡಲಾಗಿದೆ. ಇದರಿಂದಾಗಿ ಆ ದೇಶದ ಪ್ರಧಾನಿ ಶೇಖ್ ಹಸೀನಾ ಅವರು ದೇಶವನ್ನು ತೊರೆದು ಭಾರತಕ್ಕೆ ರಕ್ಷಣೆಗಾಗಿ ಬರಬೇಕಾಯಿತು ಎಂದು ತಿಳಿಸಿದರು.

ಬಾಂಗ್ಲಾದೇಶದ ಮೇಲಿನ ದೌರ್ಜನ್ಯವನ್ನು ಭಾರತ ಹೊರತುಪಡಿಸಿ ಯಾವ ದೇಶವೂ ಈ ಹಿಂದೆ ವಿರೋಧಿಸಲಿಲ್ಲ. ಆದರೆ ಈಗ ಭಾರತಕ್ಕೆ ಇರುವ ಸಮರ್ಥ ನಾಯಕತ್ವ, ನಾಯಕರಿಂದಾಗಿ, ಇಡೀ ವಿಶ್ವದ ನಾನಾ ದೇಶಗಳು ಬಾಂಗ್ಲಾದೇಶದಲ್ಲಿ ನಡೆದಿರುವ ಮತೀಯ ಗಲಭೆ ಕುರಿತು ಮಾತನಾಡುತ್ತಿವೆ. ಪಾಕಿಸ್ತಾನವನ್ನು ಯೂನಿಸೆಫ್ ಬ್ಲಾಕ್ ಲೀಸ್ಟ್ಗೆ ಸೇರಿಸಿದ್ದರಿಂದ ಆ ದೇಶಕ್ಕೆ ಸಂಕಷ್ಟವಾಗಿತ್ತು. ಭಯೋತ್ಪಾಧಕರಿಗೆ ಹೊಡೆದಾಟ ಇಲ್ಲದಿದ್ದರೆ ಕೆಲಸವೇ ಇಲ್ಲದಂತಾಗುತ್ತದೆ. ಪಾಕಿಸ್ತಾನದಲ್ಲಿ ಹೊಡೆದಾಟ ಕೆಲಸ ಮಾಡಿದ್ದಾರೆ. ಆದರೆ ಈಗ ಹೊಡೆದಾಟಕ್ಕಾಗಿ ಹೊಸ ಜಾಗ ಬೇಕಾಗಿತ್ತು. ಅದಕ್ಕಾಗಿ ಬಾಂಗ್ಲಾದೇಶದ ಮೇಲೆ ಕಣ್ಣು ಹಾಕಿ ಮತೀಯ ಗಲಭೆ ಸೃಷ್ಠಿಸಿದ್ದಾರೆ. ಇದರಲ್ಲಿ ಪಾಕಿಸ್ತಾನದ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ. ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ದೊಡ್ಡ ಅಸಮಾಧಾನವಿದ್ದರೆ, ಅವರು ಮತ್ತೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಿಗೆ ದೊಡ್ಡ ಮಟ್ಟದಲ್ಲಿ ದೊಡ್ಡ ಗಲಭೆಯನ್ನುಂಟು ಮಾಡಿ, ಶೇಖ್ ಹಸೀನಾ ಅವರು ದೇಶ ಬಿಡುವಂತೆ ಮಾಡಲಾಗಿದೆ. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಪಿತೂರಿಯಿದೆ ಎಂದರು.

ಬಾಂಗ್ಲಾದೇಶದಲ್ಲಿ ನಡೆದಿರುವ ಈ ಮತೀಯ ಗಲಭೆಯನ್ನೂ ಭಾರತದಲ್ಲೂ ಸೃಷ್ಠಿಸುವ ವಿಫಲ ಪ್ರಯತ್ನ ನಡೆಯಿತು. ಪೌರತ್ವ ಕಾಯ್ದೆಯ ವಿಚಾರವಾಗಿ ದೊಡ್ಡ ಹೋರಾಟವನ್ನೇ ನಡೆಸಲಾಯಿತು. ಬಳಿಕ ರೈತರ ದೊಡ್ಡ ಹೋರಾಟವನ್ನೂ ಸೃಷ್ಠಿಸಿ, ದೇಶದಲ್ಲಿ ಅರಾಜಕತೆ ಸೃಷ್ಠಿಸುವ ಪ್ರಯತ್ನ ಮಾಡಲಾಯಿತು. ಆದರೆ ಕೇಂದ್ರ ಸರ್ಕಾರ ದೇಶದಲ್ಲಿ ಅರಾಜಕತೆ ಸೃಷ್ಠಿಗೆ ಅವಕಾಶ ನೀಡದೆ, ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿತು. ನಮ್ಮ ದೇಶದಲ್ಲಿ ಮತೀಯ ಗಲಭೆ ಸೃಷ್ಠಿಸಲು ಹಣಕಾಸಿನ ಸಹಾಯ ನೀಡುವ ಪ್ರಯತ್ನ ನಡೆದರೂ, ಕೇಂದ್ರ ಸರ್ಕಾರದ ಕಠಿಣ ಕ್ರಮಗಳಿಂದಾಗಿ, ಮುನ್ನೆಚ್ಚರಿಕೆಯ ಕ್ರಮಗಳಿಂದಾಗಿ ದೊಡ್ಡ ಮಟ್ಟದ ಹಣಕಾಸಿನ ಸಹಾಯವನ್ನು ಪಿತೂರಿದಾರರು ಮಾಡಲು ಸಾಧ್ಯವಾಗಲಿಲ್ಲ. ಆದರೂ ಕೂಡ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ, ಪಿತೂರಿಗಳು ನಡೆಯುತ್ತಲೇ ಇವೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು ಅಮೇರಿಕಾದ ವಿವಿಗಳಲ್ಲಿ ಉಪನ್ಯಾಸ, ಭಾಷಣ ಮಾಡಲು ಕರೆಯಿಸಲಾಗುತ್ತದೆ. ಅಲ್ಲಿ ಅವರು ಮಾಡಿದ ಭಾಷಣಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಪ್ರಚಾರ ನೀಡಲಾಗುತ್ತಿದೆ. ಅಮೇರಿಕಾದ ವಿವಿಯಲ್ಲಿ ಭಾಷಣ ಮಾಡುವಷ್ಟು ಮೇದಾವಿತನ ರಾಹುಲ್‌ಗಾಂಧಿ ಅವರಿಗೆ ಇದೆಯಾ ಎಂದು ಎಲ್ಲರೂ ಯೋಚಿಸಬೇಕಾಗಿದೆ ಎಂದು ತಿಳಿಸಿದರು.

ನಮ್ಮ ಆಸುಪಾಸಿನ ದೇಶಗಳು ನೆಮ್ಮದಿಯಿಂದ ಇಲ್ಲ. ಭಾರತದ ನೆರೆಯ ರಾಷ್ಟçಗಳನ್ನು ಹಾಳು ಮಾಡಿದರೆ ಅದರ ಪರಿಣಾಮ ಭಾರತದ ಮೇಲೆ ಆಗುತ್ತದೆ. ಇದರಿಂದಾಗಿ ಭಾರತವನ್ನು ಕುಗ್ಗಿಸಬಹುದು ಎಂಬ ಸಂಚು ನಡೆಯುತ್ತಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಹಿಂದುಗಳು-ಮುಸ್ಲಿoಮರ ನಡುವೆ ದೊಡ್ಡ ಮಟ್ಟದಲ್ಲಿ ದ್ವೇಷ, ಅಸೂಯೆಗಳನ್ನು ಹುಟ್ಟಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಬಾಂಗ್ಲಾವನ್ನು ಭಯೋತ್ಪಾಧಕರ ತಾಣವನ್ನಾಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ದೇಶದಲ್ಲಿ ಬಾಂಗ್ಲಾ ನುಸುಳುಕೋರರ ಹಾವಳಿ ಹೆಚ್ಚಾಗಿದೆ. ಕರ್ನಾಟದಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನುಸುಳುಕೋರರು ಇದ್ದಾರೆ. ಬಾಂಗ್ಲಾದೇಶ-ಭಾರತದ ನಡುವೆ ೫೪ ನದಿಗಳಿವೆ. ಬಂಗಾಲಿಗಳು ಹಾಗೂ ಬಾಂಗ್ಲಾದೇಶದವರು ಒಂದೇ ರೀತಿ ಇರುವುದರಿಂದ ನುಸುಳುಕೋರರನ್ನು ತಡೆಯುವುದು, ಅವರನ್ನು ಪತ್ತೆ ಹಚ್ಚಿ ದೇಶದಿಂದ ಹೊರ ಹಾಕುವುದು ಕಷ್ಟ ಸಾಧ್ಯವಾಗುತ್ತಿದೆ ಎಂದು ನುಡಿದರು.

ನಮ್ಮ ದೇಶದ ರಕ್ಷಣೆಗಾಗಿ ನಮ್ಮ ಮಕ್ಕಳಲ್ಲಿ ದೇಶದ ಬಗ್ಗೆ ಪ್ರೀತಿಯನ್ನು ಬೆಳೆಸಬೇಕು. ಸ್ವಯಂ ರಕ್ಷಣೆಯನ್ನು ಕಲಿಸಬೇಕು. ಬಂದೂಕು ತರಬೇತಿಯನ್ನು ಕೊಡಿಸಬೇಕು. ಇದು ಮುಂದೊoದು ದಿನ ದೇಶದ ರಕ್ಷಣೆಗೆ ಬರಲಿದೆ ಎಂದು ತಿಳಿಸಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ರಾಹುಲ್ ಗಾಂಧಿ ನಿಮ್ಮ ಸೋಕಾಲ್ಡ್ ವಿಶ್ವಗುರು ನರೇಂದ್ರ ಮೋದಿಗಿಂತ ಮೇಧಾವಿ. ಟೆಲಿಪ್ರಾಂಪ್ಟರ್ ಸಹಾಯವಿಲ್ಲದೇ ಯಾವುದೇ ವಿಷಯದ ಕುರಿತು ಗಂಟೆಗಟ್ಟಲೆ ಹಿಂದಿ ಅಥವಾ ಇಂಗ್ಲೀಷ್ನಲ್ಲಿ ಸಂವಾದ ನಡೆಸಬಲ್ಲರು. ಅನಕ್ಷರಸ್ಥ ಎಂಟೈರ್ ಪೊಲಿಟಿಕಲ್ ಸಯನ್ಸ್ ಪದವೀಧರನಿಗೆ ಇದು ಸಾಧ್ಯವಿದೆಯಾ? ಸ್ವಲ್ಪ ತರ್ಕಬದ್ದವಾಗಿ ಯೋಚಿಸಿ.

LEAVE A REPLY

Please enter your comment!
Please enter your name here

error: Content is protected !!