ಮೇಷ
ಇತರರ ಜತೆ ಉತ್ತಮ ಹೊಂದಾಣಿಕೆ ಸಾಧಿಸಲು ಸಫಲರಾಗುವಿರಿ. ಇದರಿಂದ ನಿಮ್ಮ ಕೆಲವಾರು ಸಮಸ್ಯೆ ನಿವಾರಣೆಯಾಗಲಿದೆ. ಸಾಂಸಾರಿಕ ಶಾಂತಿ.
ವೃಷಭ
ವಿರಾಮವನ್ನು ಬಯಸಿದರೂ ಅದು ಇಂದು ಸಿಗದು. ದಿನವಿಡೀ ಏನಾದರೂ ಕೆಲಸ, ಹೊಣೆಗಾರಿಕೆ ನಿಮ್ಮನ್ನು ಅನುಸರಿಸುತ್ತದೆ.
ಮಿಥುನ
ಕೆಲವು ಅನುಭವಗಳು ಜೀವನದಲ್ಲಿ ಪಾಠ ಕಲಿಸುತ್ತವೆ. ಅಂತಹ ಅನುಭವ ಇಂದು ನಿಮಗಾಗಬಹುದು. ಸಮಚಿತ್ತ ಕಳೆದುಕೊಳ್ಳದಿರಿ.
ಇತರರರಿಗೆ ನೆರವು ನೀಡಲು ಹೋಗಿ ನಿಮ್ಮ ಕೈ ಸುಟ್ಟಿಕೊಳ್ಳದಿರಿ. ಆಪ್ತರಿಂದ ಅಚ್ಚರಿಯ ಸುದ್ದಿ ಕೇಳುವಿರಿ. ಸಂಜೆ ವೇಳೆಗೆ ಸ್ನೇಹಿತರ ಜತೆ ಕಾಲಕ್ಷೇಪ.
ಸಿಂಹ
ನಿಮ್ಮ ಗುರಿ ಸಾಧನೆಗೆ ಕಟಿಬದ್ಧರಾಗುವಿರಿ. ಏನೇ ಆದರೂ ಕಾರ್ಯ ಸಾಧಿಸುವ ಛಲ ತೋರುವಿರಿ. ಕೆಲವರ ವಿರೋಧ ಕಟ್ಟಿಕೊಳ್ಳುವ ಪ್ರಸಂಗ ಒದಗಬಹುದು.
ಕನ್ಯಾ
ಇಂದು ವ್ಯವಹಾರದಲ್ಲಿ ಸುಲಭದಲ್ಲೇ ಯಶಸ್ಸು ಒದಗುವುದು. ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸ ಮೂಡಲಿದೆ.
ತುಲಾ
ಇತರರಿಂದ ಪ್ರೇರಣೆ ಪಡೆಯುವ ಪ್ರಸಂಗ ಉಂಟಾದೀತು. ಅದನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ. ನಿಮ್ಮ ಹಿನ್ನಡೆಗೆ ಬೇಸರಗೊಳ್ಳದಿರಿ. ಕೌಟುಂಬಿಕ ಸಹಕಾರ.
ವೃಶ್ಚಿಕ
ಭಾವನಾತ್ಮಕ ಏರುಪೇರು. ಹಳೆಯ ನೆನಪುಗಳು ಕಾಡಬಹುದು. ಬಂಧುಗಳಿಂದ ಕಿರಿಕಿರಿ ಎದುರಿಸುವಿರಿ. ಒಟ್ಟಿನಲ್ಲಿ ಇಂದು ನಿಮ್ಮ ನೆಮ್ಮದಿಗೆ ಭಂಗ ಉಂಟಾಗಲಿದೆ.
ಧನು
ಯಾವುದೇ ಕೆಲಸವಾದರೂ ಅದನ್ನು ನಿಯಂತ್ರಿಸುವ ಸಾಮರ್ಥ್ಯ ನಿಮ್ಮಲ್ಲಿರಲಿ. ಕೈಮೀರಿ ಹೋಗದಂತೆ ನೋಡಿಕೊಳ್ಳಿ. ಬಂಧುಗಳ ಅಸಹಕಾರ.
ಮಕರ
ಉದ್ಯಮಿಗಳಿಗೆ, ಸ್ವಂತ ವ್ಯವಹಾರ ಉಳ್ಳವರಿಗೆ ಇಂದು ಒಳಿತಾಗಲಿದೆ. ಕಿರಿಕಿರಿ ತರುತ್ತಿದ್ದ ವ್ಯಕ್ತಿಯೊಬ್ಬರು ಮೌನವಾಗುವರು. ಕೌಟುಂಬಿಕ ಶಾಂತಿ.
ಕುಂಭ
ಆತ್ಮೀಯರ ಜತೆ ಇಂದು ಸಮಯ ಕಳೆಯುವ ಅವಕಾಶ. ವಿರಸ ಮೂಡಿದರೂ ಬೇಗನೆ ಸರಿಯಾಗಲಿದೆ. ಹಣದ ವಿಚಾರದಲ್ಲಿ ತುಸು ಚಿಂತೆ ಕಾಡಬಹುದು.
ಮೀನ
ಆಪ್ತರ ಜತೆ ಮೂಡುವ ಭಿನ್ನಮತವನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಸಂಧಾನದ ದಾರಿ ಒಳ್ಳೆಯದು. ಆರ್ಥಿಕ ಪರಿಸ್ಥಿತಿ ಸದೃಢ.