ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ʼಗದರ್ 2ʼ ಸಿನಿಮಾ ಮೂಲಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಸನ್ನಿ ಡಿಯೋಲ್ ಅವರ ಬಂಗಲೆ ಹರಾಜು ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಪ್ರಕಟಣೆ ಹೊರಡಿಸಿದೆ.
ಸನ್ನಿ ಡಿಯೋಲ್ ಅವರಿಗೆ ಸಂಬಂಧಿಸಿದ ಹರಾಜು ನೋಟಿಸ್ ಅನ್ನು ತಾಂತ್ರಿಕ ಕಾರಣಗಳಿಂದಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೆಯಲ್ಲಿ ವಿವರಿಸಿದೆ.
ಮುಂಬೈನ ಜುಹುನಲ್ಲಿರುವ ನಟನ ಬಂಗಲೆಯನ್ನು ಇ-ಹರಾಜು ಮೂಲಕ ಆಗಸ್ಟ್ 25 ರಂದು ಮಾರಾಟ ಮಾಡಿ ಬಾಕಿ ಇರುವ 56 ಕೋಟಿ ರೂಪಾಯಿಗಳನ್ನು ಸಾಲವನ್ನು ಪಡೆದುಕೊಳ್ಳಲಾಗುವುದು ಎಂದು ಬ್ಯಾಂಕ್ ನಿನ್ನೆ (ಭಾನುವಾರ) ತಿಳಿಸಿತ್ತು. ಆದರೆ ಇಂದು ನೋಟಿಸ್ ಅನ್ನು ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಹಿಂಪಡೆದಿದೆ.