ಪಠ್ಯ ಸಂವಿಧಾನದ ಆಶಯದಂತಿರಬೇಕು, ರಾಜಕೀಯ ಪಕ್ಷದ ಸಿದ್ಧಾಂತದಂತಲ್ಲ: ಎಂ. ಮದನಗೋಪಾಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಠ್ಯ ಪುಸ್ತಕಗಳು ಸಂವಿಧಾನದ ಆಶಯದಂತಿರಬೇಕೆ ಹೊರತು ಯಾವುದೇ ರಾಜಕೀಯ ಪಕ್ಷದ ಸಿದ್ಧಾಂತದಂತೆ ಇರಬಾರದು ಎಂದು ಐಎಎಸ್ ಅಧಿಕಾರಿ, ಎನ್.ಇ.ಪಿ-2020 ಕಾರ್ಯಪಡೆಯ ಅಧ್ಯಕ್ಷರಾಗಿದ್ದ ಎಂ. ಮದನಗೋಪಾಲ ಹೇಳಿದ್ದಾರೆ.

ಭಾರತದ ನೈಜ ಇತಿಹಾಸ ಮತ್ತು ರಾಷ್ಟ್ರಾಭಿಮಾನವನ್ನು ಮೂಡಿಸುವ ಪಠ್ಯಗಳು ಶಾಲೆಯಲ್ಲಿರಬೇಕು, ಸಂವಿಧಾನದ ಆಶಯಗಳನ್ನು ಪೂರೈಸುವಂತೆ ಪಠ್ಯಗಳನ್ನು ರಚಿಸಬೇಕು. ರಾಷ್ಟ್ರಾಭಿಮಾನಿ, ಸ್ವಾವಲಂಬನೆ ಹಾಗೂ ಭಾರತೀಯ ಸಂಸ್ಕೃತಿ ರಕ್ಷಿಸುವ ರೀತಿಯ ಪಠ್ಯಗಳಿದ್ದರೆ ಚೆನ್ನ ಎಂದಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಶಾಲಾ ಪಠ್ಯ ಪುಸ್ತಕಗಳ ಬಗ್ಗೆ ಚರ್ಚೆ ನಡೆದಿದ್ದು, ಡಾ. ಸತೀಶ್, ರೋಹಿತ್ ಚಕ್ರತೀರ್ಥ, ಡಾ. ನಂದಿನಿ, ಡಾ. ರವೀಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪೂರ ಚರ್ಚೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!