ಯುವತಿಯನ್ನು ಮುಂದಿಟ್ಟು ಹನಿಟ್ರ್ಯಾಪ್‌: ಪೊಲೀಸರ ಬಲೆಗೆ ಬಿತ್ತು ಖತರ್ನಾಕ್‌ ಗ್ಯಾಂಗ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : ‌

ಯುವತಿಯನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮುಖಾಂತರ​ ಯುವಕನನ್ನು ಸುಲಿಗೆ ಮಾಡಿದ್ದ ಖತರ್ನಾಕ್‌ ಗ್ಯಾಂಗ್​​ ಅನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಯುವತಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಶಶಾಂಕ್‌ ಎಂಬಾತನಿಗೆ ಪದೇ ಪದೇ ಮೆಸೇಜ್‌ ಮಾಡಿದ್ದಳು. ಪರಿಚಯವಾದ ಬಳಿಕ ಭೇಟಿಯಾಗುವಂತೆ ಶಶಾಂಕ್‌ರನ್ನು ಬನ್ನೇರುಘಟ್ಟಕ್ಕೆ ಕರೆಸಿಕೊಂಡಿದ್ದಾಳೆ.

ಈ ವೇಳೆ ಒಂದು ಹುಡುಗಿ ಜೊತೆ ಶಶಾಂಕ್‌ ಇರುವುದನ್ನು ಕಂಡು ಆರೋಪಿಗಳು ಧಮ್ಕಿ ಹಾಕಿದ್ದಾರೆ. ಬಳಿಕ ಆತನಿಗೆ ಬೆದರಿಸಿ, ಆತನ ಬಳಿ ಇದ್ದ ಐಫೋನ್ ಮತ್ತು ಚಿನ್ನಾಭರಣವನ್ನು ಕಳವು ಮಾಡಿದ್ದರು. ಈ ಕುರಿತು ಶಶಾಂಕ್‌ ಬನ್ನೇರುಘಟ್ಟದಲ್ಲಿ ದೂರು ನೀಡಿದ್ದರು.

ದೂರನ್ನು ಆಧರಿಸಿ ಬನ್ನೇರುಘಟ್ಟದ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ರುತಿಕ್ ಅಲಿಯಾಸ್ ವಿಷ್ಣು, ಮೊ.‌ಆಸಿಫ್, ಯಾಸೀನ್ ಪಾಷಾ, ಸಮೀರ್, ಶಾಹಿದ್ ಅಲಿ ಬಂಧಿತ ಆರೋಪಿಗಳಾಗಿದ್ದಾರೆ.

ಈ ಹನಿಟ್ರ್ಯಾಪ್‌ ನಲ್ಲಿ ಪ್ರಮುಖ ಪಾತ್ರವಹಿಸಿದ ಯುವತಿ ಅಪ್ರಾಪ್ತೆ ಎಂದು ತಿಳಿದುಬಂದಿದೆ. ಆಕೆಯನ್ನು ಬಾಲಾಪರಾಧಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಬನ್ನೇರುಘಟ್ಟ ಪೊಲೀಸರು ಠಾಣೆಯಲ್ಲಿ ಐಪಿಸಿ 397 ಅಡಿಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!