Tuesday, May 30, 2023

Latest Posts

VIRAL VIDEO| ಮೈದಾನಕ್ಕೆ ಧೋನಿ ಸ್ಟೈಲಿಶ್ ಎಂಟ್ರಿ: ಅಭಿಮಾನಿಗಳ ಜಯಘೋಷದಿಂದ ಸ್ಟೇಡಿಯಂ ಸದ್ದು 

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

IPL-2023 ರ ಹದಿನಾರನೇ ಸೀಸನ್ ಅಬ್ಬರದಿಂದ ಕೂಡಿದ್ದು, ಇದೇ 31ರಿಂದ ಮೆಗಾ ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಈಗಾಗಲೇ ಸಿಎಸ್ ಕೆ ನಾಯಕ ಎಂ.ಎಸ್. ಧೋನಿ ಅಭ್ಯಾಸವನ್ನು ಪ್ರಾರಂಭಿಸಿದರು. ಇತ್ತೀಚೆಗೆ ಚೆನ್ನೈನಲ್ಲಿ ಪ್ರಸಿದ್ಧ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡದ ಸದಸ್ಯರು ಅಭ್ಯಾಸ ನಡೆಸಿದರು. ಕ್ರಿಕೆಟಿಗರ ಅಭ್ಯಾಸ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಸಿಎಸ್ಕೆ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದ ವೇಳೆ ಅಭಿಮಾನಿಗಳು ಕುತೂಹಲದಿಂದ ವೀಕ್ಷಿಸಿದರು. ಇದೇ ವೇಳೆ ಲೆಜೆಂಡರಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕಾಲಿಗೆ ಫ್ಯಾಡ್ಸ್, ಕೈಗೆ ಗ್ಲೌಸ್, ತಲೆಗೆ ಹೆಲ್ಮೆಟ್ ಧರಿಸಿ ಬ್ಯಾಟ್ ಬೀಸುತ್ತಾ ಸ್ಟೈಲಿಶ್ ಆಗಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಯವರೆಗೆ ಸ್ವಲ್ಪ ನಿಶ್ಯಬ್ದ ಕಾಣುತ್ತಿದ್ದ ಚೇಪಾಕ್ ಸ್ಟೇಡಿಯಂ ಏಕಾಏಕಿ ಧೋನಿ ಹೆಸರು ಮೊಳಗಿತು. ಧೋನಿ ಮೈದಾನದಲ್ಲಿರುವವರೆಗೂ ಅಭಿಮಾನಿಗಳು ಧೋನಿ, ಧೋನಿ ಎಂದು ಘೋಷಣೆ ಕೂಗಿದರು.

ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!