ಮಹಾತ್ಮ ಗಾಂಧಿ ನೆಚ್ಚಿನ ಭಜನೆ ‘ವೈಷ್ಣವ ಜನ’ ಗೀತೆ ಬಗೆಗಿನ ಕುತೂಹಲಕಾರಿ ವಿಚಾರ ಹಂಚಿಕೊಂಡ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ‘ಮನ್ ಕಿ ಬಾತ್’ ಭಾಷಣದಲ್ಲಿ ಮಹಾತ್ಮ ಗಾಂಧಿಯವರ ನೆಚ್ಚಿನ ಭಜನೆಯಾದ ‘ವೈಷ್ಣವ ಜನ’ ಹಾಡಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪ್ರಧಾನ ಮಂತ್ರಿ ಹಂಚಿಕೊಂಡ ಆವೃತ್ತಿಯನ್ನು ಗ್ರೀಕ್ ಗಾಯಕ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರು ಗ್ರೀಕ್ ಜಾನಪದ ವಾದ್ಯಗಳನ್ನು ಬಳಸಿ ಹಾಡಿದ್ದಾರೆ.
ನೀವೆಲ್ಲರೂ ಈ ಹಾಡನ್ನು ಎಂದೋ ಕೇಳಿರಬಹುದು. ಅಷ್ಟಕ್ಕೂ ಇದು ಬಾಪು ಅವರ ಅಚ್ಚುಮೆಚ್ಚಿನ ಹಾಡು. ಆದರೆ ಇದನ್ನು ಹಾಡಿರುವ ಗಾಯಕರು ಗ್ರೀಸ್ ದೇಶದವರು ಎಂದು ಹೇಳಿದರೆ ನೀವು ಖಂಡಿತಾ ಆಶ್ಚರ್ಯ ಪಡುತ್ತೀರಿ! ಮತ್ತು ಈ ವಿಷಯವು ನಿಮ್ಮ ಹೃದಯದಲ್ಲಿ ಹೆಮ್ಮೆಯನ್ನು ತುಂಬುತ್ತದೆ, ”ಎಂದು ಅವರು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಮಹಾತ್ಮಾ ಗಾಂಧಿಯವರು ‘ವೈಷ್ಣವ ಜನ’ ಹಾಡನ್ನು ಹರಿಜನರಿಗಾಗಿ ಈ ಹಾಡನ್ನು ಹಾಡಿದರು ಮತ್ತು ಅವರ ಎಲ್ಲಾ ಪ್ರಾರ್ಥನಾ ಸಭೆಗಳಲ್ಲಿ ನುಡಿಸಿಸುತ್ತಿದ್ದರು. ಈ ಗೀತೆಯನ್ನು ಗಾಂಧಿ ಹುಟ್ಟುವ ಸುಮಾರು 400 ವರ್ಷಗಳ ಹಿಂದೆ ಗುಜರಾತಿ ಕವಿ ನರಸಿಂಹ ಮೆಹ್ತಾ ಅವರು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!