Wednesday, February 28, 2024

ಶಿವಮೊಗ್ಗದಲ್ಲಿ ಬಾರ್ ಕ್ಯಾಶಿಯರ್ ಕೊಲೆ ಪ್ರಕರಣ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು, ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕುಡಿಯಲು ಮಧ್ಯ ನೀಡಲು ನಿರಾಕರಿಸಿದಂತ ಬಾರ್ ಕ್ಯಾಷಿಯರ್ ಅನ್ನು ಆಯನೂರಿನಲ್ಲಿ ಗಾಂಜಾ ಮತ್ತಿನಲ್ಲಿದ್ದಂತ ಮೂವರು ಆರೋಪಿಗಳು ಡ್ರಾಗರ್ ನಿಂದ ಚುಚ್ಚಿ ಪರಾರಿಯಾಗಿದ್ದು, ಇವರಲ್ಲಿ ಪ್ರಮುಖ ಆರೋಪಿಯ ಕಾಲಿಗೆ ಗುಂಡೇಟು ನೀಡಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಆಯನೂರಿನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್ ಗೆ ನಿನ್ನೆ ರಾತ್ರಿ ತೆರಳಿದ್ದಂತ ಗಾಂಜಾ ಮತ್ತಿನಲ್ಲಿದ್ದಂತ ಮೂವರು ಆರೋಪಿಗಳು, ಮಧ್ಯಸೇವಿಸಲು ತೆರಳಿದ್ದರು. ಮಧ್ಯರಾತ್ರಿಯಾದ್ರೂ ಕುಡಿಯುತ್ತಿದ್ದಂತ ಅವರನ್ನು ಸಮಯ ಆಗಿದೆ. ಹೊರಡುವಂತೆ ಕ್ಯಾಶಿಯರ್ ಸಚಿನ್ ಸೂ ಚಿಸಿದ್ದಾರೆ.

ಇಷ್ಟೇ ಕಾರಣಕ್ಕೆ ಕಿರಿಕ್ ಮಾಡಿದಂತ ಮೂವರು, ಕುಡಿದ ಮತ್ತಿನಲ್ಲಿ ತಾವು ಮದ್ಯ ಸೇವಿಸಬೇಕು. ಹೋಗುವುದಿಲ್ಲ ಎಂದು ಮತ್ತೆ ಮದ್ಯ ಕೊಡುವಂತೆ ಕೇಳಿದ್ದಾರೆ. ಆದ್ರೇ ಅದಕ್ಕೆ ಕ್ಯಾಶಿಯರ್ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾದಂತ ಮೂವರು, ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಡ್ಯಾಗರ್ ಇಟ್ಟುಕೊಂಡಿದ್ದಂತ ಆರೋಪಿಯೊಬ್ಬ ಸಚಿನ್ ಗೆ ಚುಚ್ಚಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕುಂಸಿ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆಗೆ ಇಳಿದರು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಂತ ಸತೀಶ್ ಎಂಬಾತ ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದಂತ ಪೊಲೀಸರು, ಆತನಿರುವಂತ ಸ್ಥಳಕ್ಕೆ ತೆರಳಿದರು. ಶರಣಾಗುವಂತೆ ಸೂಚಿಸಿದರು ಪೊಲೀಸರ ಸೂಚನೆ ಮೀರಿ ಪರಾರಿಯಾಗಲು ಆರೋಪಿ ಸತೀಶ್ ಯತ್ನಿಸಿದರು. ಅಲ್ಲದೇ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೂ ಯತ್ನಿಸಿದ್ದಾನೆ.

ಈ ವೇಳೆಯಲ್ಲಿ ಪೊಲೀಸರು ಆರೋಪಿ ಸತೀಶ್ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ. ಪೊಲೀಸರ ಗಂಡೇಟಿನಿಂದ ಗಾಯಗೊಂಡಿರುವಂತ ಆರೋಪಿ ಸತೀಶ್ ಅನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!