ಬಾರಾಮುಲ್ಲಾ ಸೇನಾ ಕ್ಯಾಂಪ್​ನಲ್ಲಿ ಯೋಧರ ಜೊತೆ ಭೋಜನ ಸವಿದ ರಕ್ಷಣಾ ಸಚಿವರು! ​

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ 2 ದಿನಗಳ ಜಮ್ಮು- ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಇಂದು ಬಾರಾಮುಲ್ಲಾ ಸೇನಾ ಕ್ಯಾಂಪ್​ನಲ್ಲಿ ಸೈನಿಕರೊಂದಿಗೆ ಭೋಜನ ಸವಿದರು.
ಎರಡು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಿಂಗ್​, ಸೈನಿಕರ ಜೊತೆ ಸಂವಾದ ನಡೆಸಲಿದ್ದಾರೆ. ನಾಳೆ ಜಮ್ಮುವಿನಲ್ಲಿ ಮಹಾರಾಜ ಗುಲಾಬ್ ಸಿಂಗ್ ಜಿ ಅವರ ರಾಜ್ಯಾಭಿಷೇಕ ಸಮಾರಂಭದ 200ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಬಾರಾಮುಲ್ಲಾದಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಗಡಿ ಭದ್ರತಾ ಪಡೆಯನ್ನು(ಬಿಎಸ್​ಎಫ್​) ‘ದೇಶದ ಬೇಲಿ ತಂತಿ’ಗೆ ಹೋಲಿಸಿದರು. ಬಿಎಸ್​ಎಫ್​ ಯೋಧರು ದೇಶದ ರಕ್ಷಣಾ ಬೇಲಿಯಂತೆ ಕೆಲಸ ಮಾಡುತ್ತಿದ್ದಾರೆ. ಗಡಿಯಲ್ಲಿ ನಿಂತು ದೇಶವನ್ನು ಎದೆಗಾರಿಕೆಯಿಂದ ಕಾಪಾಡುವವರು ಎಂದು ಹೊಗಳಿದ್ದಾರೆ.
ಇದಕ್ಕೂ ಮೊದಲು ಸಚಿವ ರಾಜನಾಥ್​ ಸಿಂಗ್​, 2 ವರ್ಷಗಳ ಹಿಂದೆ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಹುತಾತ್ಮರಾದ ಸೇನಾ ಯೋಧರಿಗೆ ಗೌರವ ಸಲ್ಲಿಸಿದರು.
2020 ರಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಜೊತೆಗಿನ ಹಿಂಸಾತ್ಮಕ ಹೋರಾಟದಲ್ಲಿ 20 ವೀರ ಸೈನಿಕರು ಹುತಾತ್ಮರಾಗಿದ್ದರು. ದೇಶದ ಗೌರವಕ್ಕಾಗಿ ವೀರಾವೇಶದಿಂದ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಗಲ್ವಾನ್ ವೀರರಿಗೆ ನನ್ನ ನಮನ. ಅವರ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ದೇಶ ಎಂದಿಗೂ ಮರೆಯಲಾಗದು ಎಂದು ಸಚಿವ ಸಿಂಗ್‌ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!