ನಿಯಂತ್ರಣ ತಪ್ಪಿ ಬಾವಿಗೆ ಬೀಳಲಿದ್ದ ಬಸ್: ಪ್ರಯಾಣಿಕರ ಪ್ರಾಣ ಉಳಿಸಿದ ಮರ!

ಹೊಸದಿಗಂತ ಆನ್ ಲೈನ್ ಡೆಸ್ಕ್

ಚಾಲಕನ ನಿಯಂತ್ರಣ ತಪ್ಪಿದ ಬಸ್ ಇನ್ನೇನು ಆಳ ಬಾವಿಗೆ ಬೀಳಬೇಕು ಅನ್ನುವಷ್ಟರಲ್ಲಿ ಆಪದ್ಬಾಂಧವನಾಗಿ ಬಂದ ಬೇವಿನ ಮರ, 70 ಜನರ ಪ್ರಾಣ ಉಳಿಸಿದೆ.
ಇಂಡಿಯಿಂದ ವಿಜಯಪುರಕ್ಕೆ ಗುರುವಾರ ಇಂಡಿ ಡಿಪೋದ ಸಾರಿಗೆ ಬಸ್ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ನಾಗಠಾಣ ಮತ್ತು ಅಲಿಯಾಬಾದ್ ನಡುವಿನ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಬದಿಯ ತಗ್ಗು ಪದೇಶಕ್ಕೆ ನುಗ್ಗಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಮರದ ಮುಂದೆಯೇ ಆಳ ಬಾವಿ ಇದೆ. ಬೇವಿನ ಮರ ಅಡ್ಡ ಇರದೇ ಹೋಗಿದ್ದರೆ ಬಸ್ ನೇರವಾಗಿ ಬಾವಿಗೆ ಬೀಳುತ್ತಿತ್ತು.
ಬಸ್​ನಲ್ಲಿದ್ದ ಮೂರ್ನಾಲ್ಕು ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!