ಬ್ಲಡ್‌ ಗ್ರೂಪ್‌ ಬದಲಾಗಿ ಬಾಣಂತಿ ಸಾವು, ಅವಳಿ ಮಕ್ಕಳು ಅನಾಥ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಹಿಳೆಗೆ ಬೇರೆ ಗ್ರೂಪ್‌ನ ಬ್ಲಡ್‌ ನೀಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ದದಾಮಟ್ಟಿ ಗ್ರಾಮದ ಶಾರದ ದೊಡ್ಡಮನಿ ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ವೇಳೆ ಬದಲಾದ ಬ್ಲಡ್‌ ಗ್ರೂಪ್‌ನ ರಕ್ತ ನೀಡಿದ್ದು, ಶಾರದಾ ಮೃತಪಟ್ಟಿದ್ದಾರೆ. ಅವರ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ.

ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ, ಶಾರದಾ ಮನೆಯಲ್ಲಿದ್ದ ಮೂರು ವರ್ಷದ ಮಗು ಹಾಗೂ ಇಬ್ಬರು ಮಕ್ಕಳು ತಾಯಿಯಿಲ್ಲದೆ ಬೆಳೆಯುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!