Sunday, August 14, 2022

Latest Posts

ಪ್ರಥಮ ಅಂತಾರಾಷ್ಟ್ರೀಯ ಪಂದ್ಯವಾಡಿದ ಬಾರ್ಬಡೋಸ್‌ ವಿರುದ್ಧ ಸೋತ ಪಾಕಿಸ್ತಾನ..!

ಹೊಸಗಂತ ಡಿಜಿಟಲ್‌ ಡೆಸ್ಕ್‌ 
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಬಾರ್ಬಡೋಸ್‌ ವಿರುದ್ಧ 15 ರನ್‌ಗಳ ಸೋಲು ಕಾಣುವ ಮೂಲಕ ಪಾಕಿಸ್ತಾನ ಭಾರೀ ಮುಖಭಂಗಕ್ಕೆ ಒಳಗಾಗಿದೆ.
‌ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಬಾರ್ಬಡೋಸ್, ಮೊದಲು ಬ್ಯಾಟಿಂಗ್‌ ನಡೆಸಿ 4 ವಿಕೆಟ್‌ ನಷ್ಟಕ್ಕೆ 144 ರನ್ಗಳ ಮೊತ್ತ ಕಲೆಹಾಕಿತು. ತಂಡದ ಪರ ನಾಯಕಿ  ಹೈಲಿ ಮ್ಯಾಥ್ಯೂಸ್ 51 ಹಾಗೂ ಕಿಸಿಯಾ 62* ರನ್ ಗಳಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು.
ಇದಕ್ಕುತ್ತರವಾಗಿ ಬ್ಯಾಟಿಂಗ್‌ ಗೆ ಇಳಿದ ಪಾಕಿಸ್ತಾನವು ನಿಗದಿತ 20 ಓವರ್‌ ಗಳಲ್ಲಿ 129 ರನ್‌ ಗಳನ್ನಷ್ಟೇ ಕಲೆಹಾಕಲು ಶಕ್ತವಾಗಿ 15 ರನ್‌ ಗಳಿಂದ ಸೋಲನ್ನಪ್ಪಿಕೊಂಡಿತು. ಪಾಕ್‌ ಪರ ನಿದಾ ದರ್‌ 50 ರನ್‌ ಕಲೆಹಾಕಿ ಏಕಾಂಗಿ ಹೋರಾಟ ನಡೆಸಿದರಾದರೂ, ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಲು ಸಾಧ್ಯವಾಗಲಿಲ್ಲ. ಕಾಮನ್‌ ವೆಲ್ತ್ ಕ್ರೀಡಾಕೂಟದಲ್ಲಿ ಬಾರ್ಬಡೋಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಪಾಕಿಸ್ತಾನವು ಜುಲೈ 31 ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಭಾರತವನ್ನು (ಮಧ್ಯಾಹ್ನ 3.30 ಪಂದ್ಯಾರಂಭ) ಎದುರಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss