ಹೊಸದಿಗಂತ ವರದಿ, ಕಲಬುರಗಿ
ಹರಿತವಾದ ಚಾಕುವಿನಿಂದ ಮಹಿಳೆಯ ಕತ್ತನ್ನು ಕೊಯ್ದು ಬಬ೯ರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ನಗರದ ನೂರಾನಿ ಮೊಹಲ್ಲಾ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಶಹನಾ ಬೇಗಂ 36 ಕೊಲೆಯಾದ ಮಹಿಳೆಯಾಗಿದ್ದು, ಬಿಲಾಲಾಬಾದ್ ಕಾಲೋನಿಯ ವಸೀಂ ಅಕ್ರಂಎಂಬಾತನಿಂದ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಶಹನಾ ಬೇಗಂ ಜೊತೆಯಲ್ಲಿ ವಸೀಂ ಅಕ್ರಂ,ನ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಮಾಹಿತಿ ಬಂದಿದ್ದು, ಕಂಠಪೂರ್ತಿ ಕುಡಿದುಕೊಂಡು ಬಂದು,ಶಹನಾ,ಗೆ ಹಣ ಕೊಡುವಂತೆ ಕಿರಿಕ್ ಮಾಡಿದ್ದಾನೆ.
ತದನಂತರ ಕೊಲೆ ಮಾಡಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೋಲಿಸರು ಜಾಲವನ್ನು ಬೀಸಿದ್ದಾರೆ.
ರೋಜಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ