ಲಿಬಿಯಾದಲ್ಲಿ ವಿನಾಶ ಸೃಷ್ಟಿಸಿದ ಪ್ರವಾಹ: ಮೃತರ ಸಂಖ್ಯೆ 11,300ಕ್ಕೆ ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೂರ್ವ ಲಿಬಿಯಾದ ನಗರವಾದ ಡರ್ನಾದಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 11,300ಕ್ಕೆ ಏರಿಕೆಯಾಗಿದೆ. ಅಲ್ಲದೆ 10,100 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಡರ್ನಾದಲ್ಲಿ ಗುರುವಾರ ಬೆಳಗಿನ ವೇಳೆಗೆ 3,000 ಕ್ಕೂ ಹೆಚ್ಚು ಜನರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ. ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದು, ನಗರದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದಿಂದಾಗಿ ಉತ್ತರ ಆಫ್ರಿಕಾದ ದೇಶ ಲಿಬಿಯಾದ ಪೂರ್ವ ಭಾಗದಲ್ಲಿ ಭಾರೀ ಮಳೆಯಾಗಿದೆ. ಇದರ ಪರಿಣಾಮ ಡ್ಯಾಂ ಒಡೆದು ಭೀಕರ ಪ್ರವಾಹ ಉಂಟಾಗಿದೆ. ಈವರೆಗೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಚಂಡಮಾರುತ ಹಾಗೂ ಬಿರುಗಾಳಿಯಿಂದಾಗಿ ಡೇನಿಯಲ್ ಲಿಬಿಯಾದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಡರ್ನಾ ನಗರದಲ್ಲಿ ಕಟ್ಟಡಗಳು ಮತ್ತು ರಸ್ತೆಗಳು ಹಾನಿಗೊಳಗಾಗಿವೆ. ಲಿಬಿಯಾ ಕರಾವಳಿಯಲ್ಲಿ ಕಟ್ಟಡಗಳು ನೆಲಕ್ಕುರುಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!