ಹೊಸದಿಗಂತ ವಿಜಯಪುರ:
ಯುವಕನ ಬರ್ಬರ ಹತ್ಯೆಯಾಗಿರುವ ಘಟನೆ ಜಿಲ್ಲೆಯ ಭೀಮಾತೀರದ ಇಂಡಿ ತಾಲೂಕಿನ ಅಗರಖೇಡ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಇಂಡಿಯ ಇಂಗಳಗಿ ತಾಂಡಾ ಸಂಕೇತ ಚವ್ಹಾಣ (16) ಹತ್ಯೆಯಾದ ಯುವಕ.
ಸಂಕೇತ ಚವ್ಹಾಣ ಈತನಿಗೆ ನಾಲ್ವರು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.